Come out of the drinking.
ತುರುವೇಕೆರೆ: ಕುಡಿತದಿಂದ ಸಿಗುವ ಲಾಭ ಎಂದರೆ ಅದು ಅವಮಾನ ಮಾತ್ರ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತುಮಕೂರು 1 ಜಿಲ್ಲೆಯ ಸಂಘಟನಾ ಅಧ್ಯಕ್ಷ ಕಾಮರಾಜ್ ಹೇಳಿದರು.
ತಾಲೂಕಿನ ಮುನಿಯೂರು ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ತುರುವೇಕೆರೆ ಗ್ರಾಮಾಂತರ ತಾಲೂಕು ಮದ್ಯ ವರ್ಜನಾ ವ್ಯವಸ್ಥಾಪನ ಸಮಿತಿ ಮುನಿಯೂರು, ಕೊಂಡಜ್ಜಿ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತುಮಕೂರು 1 ಜಿಲ್ಲೆ ಮತ್ತು ಹಲವಾರು ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರಂಭದಲ್ಲಿ ಮಾತನಾಡಿದರು.
ಕುಡಿತದಿಂದ ಹೊರಬಂದು ಹೊಸ ಜೀವನವನ್ನು ಕಂಡುಕೊಳ್ಳಲಾಗಿದೆ. ಶಿಬಿರಾರ್ಥಿಗಳನ್ನು ನವ ಜೀವನ ಸದಸ್ಯರನ್ನಾಗಿ ಮಾಡಿ ನಿಮ್ಮ ಕುಟುಂಬಗಳಿಗೆ ಕಳುಹಿಸಿ ಕೊಡುತ್ತಿದ್ದೇವೆ ಎಂದರು. ಇಲ್ಲಿಯವರೆಗೂ 1.40 ಸಾವಿರ ಕುಟುಂಬಗಳಿಗೆ ಮದ್ಯ ವರ್ಜನ ಶಿಬಿರದಿಂದ ಕುಟುಂಬಗಳ ಅಭಿವೃದ್ಧಿ ಆಗಿದೆ. ಈ ಕಾರ್ಯಕ್ರಮದಿಂದ ಅನೇಕ ಕುಟುಂಬಗಳು ಬೆಳಕನ್ನು ಕಂಡಿದೆ ಎಂದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಣ್ಣ, ವರ್ತಕ ಮುನಿಯೂರು ಮೂರ್ತಿ, ವಕೀಲ ಪಿ.ಎಚ್.ಧನಪಾಲ್, ವೀರಶೈವ ಮುಖಂಡ ಕುಮಾರಸ್ವಾಮಿ ಇತರರಿದ್ದರು.
ಒಲಂಪಿಯಾಡ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.