ತುಮಕೂರು-ಊರುಕೆರೆ ಹಾಗೂ ಊರುಕೆರೆ-ತಿಮ್ಮರಾಜನಹಳ್ಳಿ ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ಜನಕ್​ ಕುಮಾರ್​ ಗರ್ಗ್​, ಅಜಯ್​ಶರ್ಮ, ಆಶುತೋಷ್​ಕುಮಾರ್​ ಸಿಂಗ್​, ಪದ್ರೀಪ್​ ಪುರಿ , ಎಂ.ವಿ. ಪ್ರಸಾದ್​, ಸೂರಜ್​ಕುಮಾರ್​ ಮತ್ತಿತರರು ಇದ್ದರು.  
ತುಮಕೂರು

ತುಮಕೂರು-ಊರುಕೆರೆ ರೈಲ್ವೆ ಮಾರ್ಗ ವೇಗ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಊರುಕೆರೆ-ತಿಮ್ಮರಾಜನಹಳ್ಳಿ ಮಾರ್ಗ ಪರಿಶೀಲನೆ
  • ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ
  • ಈ ಮಾರ್ಗಗಳಲ್ಲಿ 24 ರಸ್ತೆ ಕೆಳಸೇತುವೆ ನಿರ್ಮಾಣ
ತುಮುಕೂರು: ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಯೋಜನೆ ಭಾಗವಾದ ತುಮಕೂರು-ಊರುಕೆರೆ (11 ಕಿ.ಮೀ.,) ರೈಲ್ವೆ ಮಾರ್ಗ ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗ ಯೋಜನೆಭಾಗವಾದ ಊರುಕೆರೆ-ತಿಮ್ಮರಾಜನಹಳ್ಳಿ (13 ಕಿ.ಮೀ.) ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ವೇಗ ಹಾಗೂ ಕಡ್ಡಾಯ ತಪಾಸಣೆಯನ್ನು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಜನಕ್​ ಕುಮಾರ್​ ಗರ್ಗ್​ ನೇತೃತ್ವದಲ್ಲಿ ಶುಕ್ರವಾರ ನಡೆಸಲಾಯಿತು.
ಮುಖ್ಯ ಆಡಳಿತಾಧಿಕಾರಿ ಅಜಯ್​ಶರ್ಮ, ಬೆಂಗಳೂರು ವಿಭಾಗೀಯ ರೃಲ್ವೆ ವ್ಯವಸ್ಥಾಪಕ ಆಶುತೋಷ್​ಕುಮಾರ್​ ಸಿಂಗ್​, ಮುಖ್ಯ ಇಂಜಿನಿಯರ್​ ಗಳಾದ ಪದ್ರೀಪ್​ ಪುರಿ, ಎಂ.ವಿ. ಪ್ರಸಾದ್​, ಡೆಪ್ಯೂಟಿ ಚೀಫ್ ಇಂಜಿನಿಯರ್​ ಸೂರಜ್​ಕುಮಾರ್​ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
207 ಕಿ.ಮೀ. ಉದ್ದದ ತುಮಕೂರು& ರಾಯದುರ್ಗ ರೈಲ್ವೆ ಮಾರ್ಗ ಯೋಜನೆಯಲ್ಲಿ ಈ ವರೆಗೆ 83 ಕಿ.ಮೀ., ಮಾರ್ಗವನ್ನು ಕಾರ್ಯನಿಯೋಜನೆಗೊಳಿಸಲಾಗಿದೆ. ತುಮಕೂರು-ಊರುಕೆರೆ ಹೊಸ ಮಾರ್ಗದಲ್ಲಿ 18 ಕಿರುಸೇತುವೆಗಳು, 2 ದೊಡ್ಡ ಸೇತುವೆಗಳು ಹಾಗೂ 18 ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಊರುಕೆರೆ ನಿಲ್ದಾಣ ಯಾರ್ಡ್​ 4 ಲೈನ್​ಗಳನ್ನು ಹೊಂದಿದೆ.
ಊರುಕೆರೆ-ತಿಮ್ಮರಾಜನಹಳ್ಳಿ ಹೊಸ ಮಾರ್ಗದಲ್ಲಿ 5 ದೊಡ್ಡಸೇತುವೆಗಳು, 17 ಕಿರುಸೇತುವೆಗಳು, 4 ರಸ್ತೆ ಮೇಲ್ಸೆತುವೆಗಳು, 6 ರಸ್ತೆ ಕೆಳಸೇತುವೆಗಳು ಹಾಗೂ ತಿಮ್ಮರಾಜನಹಳ್ಳಿಯಲ್ಲಿ ಒಂದು ಪ್ರಯಾಣಿಕರ ಸಬ್​ವೇಯನ್ನು ನಿರ್ಮಿಸಲಾಗಿದೆ. ತಿಮ್ಮರಾಜನಹಳ್ಳಿ ನಿಲ್ದಾಣ 5 ಲೈನ್​ಗಳನ್ನು ಹೊಂದಿದೆ.