ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿಯಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗೆ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ನಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿದರು.
- ಗಡಿ ತಪಾಸಣಾ ಕೇಂದ್ರಗಳಲ್ಲಿ ಅವ್ಯವಸ್ಥೆ
ಗಡಿ ತಪಾಸಣಾ ಕೇಂದ್ರಗಳಲ್ಲಿ ಅವ್ಯವಸ್ಥೆ
ಪಾವಗಡ: ಕರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಚೆಕ್ಪೋಸ್ಟ್ ಸ್ಥಾಪಿಸಿಸಲಾಗಿದೆ. ಆದರೆ ಆರೋಗ್ಯ ತಪಾಸಣೆಗೆ ಕನಿಷ್ಠಪ ಶುಶ್ರೂಷಕಿಯನ್ನು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸದೆ ತಾಲೂಕು ಆಡಳಿತ ರ್ನಿಲಕ್ಷ$್ಯವಹಿಸಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಮೃತರ ಸಂಪರ್ಕದಲ್ಲಿದ್ದ 9 ಮಂದಿಗೆ ಪಾಸಿಟಿವ್ ವರದಿಯಾದ ಬೆನ್ನಲ್ಲೆ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ತಹಸೀಲ್ದಾರ್ ವೈ. ರವಿ ಚೆಕ್ಪೋಸ್ಟ್ ಬಳಿ ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿಗಳನ್ನು ನೇಮಿಸಿ ಆಂಧ್ರದಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ನಡೆಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕಿನ ತುಮಕೂರು ರಸ್ತೆಯ ರಾಜವಂತಿ, ನಾಲಮಡಿಕೆ, ಬಳ್ಳಾರಿ ರಸ್ತೆಯ ಕರ್ನಾಟಕ ಗಡಿಯ ಗ್ರಾಮ ನಾಗಲಾಪುರ, ಆಮರಾಪುರಕ್ಕೆ ಸಂಪರ್ಕ ಕಲ್ಪಿಸುವ ಅರಸೀಕೆರೆ ಹಾಗೂ ರೋದ್ದ ಸಂಪರ್ಕ ಕಲ್ಪಿಸುವ ಟಿ.ಎನ್ ಪೇಟೆ ಸೇರಿ 5 ಕಡೆಗಳಲ್ಲಿ ತಾತ್ಕಾಲಿಕ ತಪಾಸಣಾ ಕೇಂದ್ರಗಳನ್ನ ಸ್ಥಾಪಿಸಿಸಲಾಗಿದೆ.
ಆರೋಗ್ಯ ತಪಾಸಣೆಗೆ ಆಶಾ ಕಾರ್ಯಕರ್ತೆ ಮತ್ತು ಗ್ರಾಪಂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಪಾವಗಡ&ಬಳ್ಳಾರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುವ ವಾಹನಗಳ ತಡೆಗೆ ಯಾವುದೇ ಬ್ಯಾರಿಕೇಡ್ ವ್ಯವಸ್ಥೆ ಮಾಡಿಲ್ಲ. ಅತೀ ಹೆಚ್ಚು ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ವೇಗವಾಗಿ ಬರುವ ವಾಹನಗಳು ನಿಲ್ಲಿಸದೇ ಮುನ್ನುಗುತ್ತಿವೆ. ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇನ್ನು ಅರಸೀಕೆರೆ ಚೆಕ್ಪೋಸ್ಟ್ಗೆ ನಿಯೋಜಿಸಲಾದ ಸಿಬ್ಬಂದಿ ಬೆಳಗ್ಗೆ 8ರಿಂದ 11 ಗಂಟೆಯ ನಂತರ ಯಾರು ಬರುವುದಿಲ್ಲವೆಂದು ಮನೆ ಸೇರುತ್ತಿದ್ದಾರೆ. ಇನ್ನೂ ಕೆಲ ಚೆಕ್ಪೋಸ್ಟ್ಗಳಲ್ಲಿ ಕುಡಿಯುವ ನೀರು ಸೌಕರ್ಯವಿಲ್ಲ, ಥರ್ಮೋ ಮೀಟರ್ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ನಿಯೊಜನೆಗೊಂಡಿರುವ ಸಿಬ್ಬಂದಿ ಪೊಲೀಸ್ ಅಲ್ಲದಿರುವುದರಿಂದ ವೇಗವಾಗಿ ಬರುವ ವಾಹನಗಳನ್ನು ತಡೆಯಲು ಸಾಧ್ಯವಾಗದೇ ಕೇವಲ ಜಿಪಿಎಸ್ ೋಟೊ ತೆಗೆದು ಇಲಾಖೆ ಅಧಿಕಾರಗಳಿಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.
ಆರೋಗ್ಯ, ವ್ಯವಹಾರ ಸೇರಿ ಸೋಮವಾರ ನಡೆಯುವ ಕುರಿ, ಮೇಕೆ, ತರಕಾರಿ ಸಂತೆಗೆ ಸಾವಿರಾರು ಮಂದಿ ಆಂಧ್ರದಿಂದ ಪಾವಗಡಕ್ಕೆ ಬರುತ್ತಾರೆ. ಆದ್ದರಿಂದ ಆರೋಗ್ಯ ತಪಾಸಣೆ ಜತೆಗೆ ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ ಚೆಕ್ಪೊಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಜತೆಗೆ ಮೂಲ ಸೌಕರ್ಯ, ಔಷಧೋಪಚಾರ, ಸಲಕರಣೆಗಳನ್ನು ಒದಗಿಸಿ ಆಂಧ್ರದಿಂದ ಬರುವ ಸಾರ್ವಜನಿಕರನ್ನು ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಲು ತಾಲೂಕು ಆಡಳಿತ ಅಗತ್ಯ ಕ್ರಮವಹಿಸಬೇಕಿದೆ.