- ಮಾರ್ಗ ಬದಲಾಯಿಸಿ ಪೊಲೀಸ್ ಇಲಾಖೆ ಆದೇಶ
- ನಗರವಾಸಿಗಳಿಗೆ ಕೋಡಿ ಸರ್ಕಲ್ ಕಾಮಗಾರಿ ಎಫೆಕ್ಟ್
- ಅಕ್ಟೋಬರ್ 31ರ ವರೆಗೆ ಮಾರ್ಗ ಬದಲಾವಣೆ ಫಿಕ್ಸ್
ತುಮಕೂರು: ತಿಪಟೂರು ನಗರದ ಕೋಡಿ ಸರ್ಕಲ್ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ 2026ರ ಅಕ್ಟೋಬರ್ 31ರ ವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಆದೇಶಿಸಿದ್ದಾರೆ.
ತಿಪಟೂರು ನಗರ ಮತ್ತು ಹಾಸನ ಕಡೆಯಿಂದ ತುಮಕೂರು ಕಡೆ ಹೋಗುವ ಭಾರಿ ವಾಹನಗಳು ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಅಂಬೇಡ್ಕರ್ ವೃತ್ತದಿಂದ(ಐ.ಬಿ.ಸರ್ಕಲ್) ಹುಳಿಯಾರು ರಸ್ತೆ ಮೂಲಕ ಮಂಜುನಾಥನಗರದ ಬಳಿಯ ಬೈಪಾಸ್ ರಸ್ತೆಯಲ್ಲಿ ಹೋಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತುಮಕೂರಿಗೆ ಹೋಗಬೇಕಿದೆ.
ಕೆಎಸ್ಆರ್ಟಿಸಿ ಬಸ್ಗಳು ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತ- ಹುಳಿಯಾರು ರಸ್ತೆ ಮೂಲಕ ಮಂಜುನಾಥನಗರದ ಬಳಿಯ ಬೈಪಾಸ್ ರಸ್ತೆಯಲ್ಲಿ ಹೋಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತುಮಕೂರಿಗೆ ಹೋಗಬೇಕು.
ತುರುವೇಕೆರೆ ಮತ್ತು ಚೆನ್ನರಾಯಪಟ್ಟಣ ಕಡೆಯಿಂದ ತುಮಕೂರು ಕಡೆ ಹೋಗುವ ಭಾರಿ ವಾಹನಗಳನ್ನು ಕೋಡಿ ಸರ್ಕಲ್ನಿಂದ ಅಂಬೇಡ್ಕರ್ ವೃತ್ತದ ಮೂಲಕ ಹುಳಿಯಾರು ರಸ್ತೆಗೆ ಹೋಗಿ ಮಂಜುನಾಥ ನಗರದ ಬಳಿಯ ಬೈಪಾಸ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಿಂದ ತುಮಕೂರಿಗೆ ತೆರಳಬೇಕಿದ್ದು ಸಂಚಾರ ಹಸ್ತವ್ಯಸ್ತವಾಗಿರಲಿದೆ.
ತುಮಕೂರು ಮತ್ತು ಚಿಕ್ಕನಾಯಕನಹಳ್ಳಿ ಕಡೆಯಿಂದ ತಿಪಟೂರು ನಗರ, ಹಾಸನ ಮತ್ತು ತುರುವೇಕೆರೆ ಕಡೆ ಹೋಗುವ ಭಾರಿ ವಾಹನಗಳು ಕೊಲ್ವಾರಿ ಚರ್ಚ್ ಬಳಿಯ ರಾಷ್ಟ್ರೀಯ ಹೆದ್ದಾರಿ ಮತ್ತು ಕಲ್ಲೇಗೌಡನಪಾಳ್ಯ ಬೈಪಾಸ್ ರಸ್ತೆಯ ಮೂಲಕ ಹುಳಿಯಾರು ರಸ್ತೆಗೆ ಬಂದು ಮಂಜುನಾಥ ನಗರದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದು ತಿಪಟೂರು, ತುರುವೇಕೆರೆ ಮತ್ತು ಹಾಸನದ ಕಡೆ ರಸ್ತೆಯ ಮೂಲಕ ಹೋಗಬೇಕು.
ಕೆಎಸ್ಆರ್ಟಿಸಿ ಬಸ್ಗಳು ಕೊಲ್ವಾರಿ ಚರ್ಚ್ ಬಳಿಯ ರಾಷ್ಟ್ರೀಯ ಹೆದ್ದಾರಿ ಮತ್ತು ಕಲ್ಲೇಗೌಡನಪಾಳ್ಯ ಬೈಪಾಸ್ ರಸ್ತೆಯ ಮೂಲಕ ಹುಳಿಯಾರು ರಸ್ತೆಗೆ ಬಂದು ಮಂಜುನಾಥ ನಗರದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದು ತಿಪಟೂರು ಬಸ್ ನಿಲ್ದಾಣಕ್ಕೆ ಹೋಗುವಂತೆ ಆದೇಶಿಸಲಾಗಿದ್ದು ವಾಹನ ಚಾಲಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ.