ಗುಬ್ಬಿ: ಪಟ್ಟಣ ಹೊರವಲಯದ ಶ್ರೀ ಚಿದಂಬರಾಶ್ರಮದಲ್ಲಿ ಲೋಕಕಲ್ಯಾಣಾರ್ಥಕವಾಗಿ ಹಮ್ಮಿಕೊಂಡಿದ್ದ ಚಂಡಿಯಾಗವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಆಶ್ರಮದ ಋಚೀಕ ನಿತ್ಯಯಾಗಶಾಲೆಯಲ್ಲಿ ವೇದಪಂಡಿತರು ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಚಂಡಿಯಾಗವನ್ನು ವಿಧಿವತ್ತಾಗಿ ನಡೆಸಿದರು. ಪೂಜಾ ಕೈಂಕರ್ಯಕ್ಕೆ ನೂರಾರು ಭಕ್ತರು ಆಗಮಿಸಿದ್ದರು. ಶ್ರೀ ಚಿದಂಬರಾಶ್ರಮದ ಅಧ್ಯಕ್ಷ ಡಾ.ಸಚ್ಚಿದಾನಂದ ಶಮಾರ್ ಮಾತನಾಡಿ, ಸಮಾಜದ ಒಳಿತಿಗಾಗಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.