Census helps government plan 
ತುಮಕೂರು

ಸರ್ಕಾರ ಯೋಜನೆ ರೂಪಿಸಲು ಗಣತಿ ಸಹಕಾರಿ

ತುಮಕೂರು ಡೆಸ್ಕ್
ಚಿಕ್ಕನಾಯಕನಹಳ್ಳಿ; ದೇಶದಲ್ಲಿನ ಪ್ರತಿಯೊಬ್ಬರ ಸ್ಥಿತಿಗತಿಯನ್ನು ತಿಳಿಯಲು ಹಾಗೂ ಸರ್ಕಾರ ಯೋಜನೆಗಳನ್ನು ರೂಪಿಸಲು ಎಲ್ಲರ ಮಾಹಿತಿ ತುಂಬಾ ಅವಶ್ಯಕತೆ ಇದೆ. ಅದ್ದರಿಂದ ಜನಗಣತಿಯಲ್ಲಿ ಎಲ್ಲ ಸಾರ್ವಜನಿಕರು ಕೈಜೊಡಿಸಬೇಕೆಂದು ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಅದೇಶದಂತೆ ಏ.1ರಿಂದ 15ವರೆಗೆ ಸಾರ್ವಜನಿಕರು ಸ್ವಯಂ ಗಣತಿಯನ್ನು ಮಾಡಿಕೊಳ್ಳುವ ಮೂಲಕ ಮಾಹಿತಿ ನೀಡಬೇಕಿದೆ. ಸಾರ್ವಜನಿಕರು ತಮ್ಮ ಮೊಬೈಲ್​ನಿಂದ ತಾವೇ ಗಣತಿಯನ್ನು ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ನಾಗರಿಕರ ಸಹಕಾರ ಮುಖ್ಯವಾಗಿದೆ. ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕಾದರೆ ನಿಖರವಾದ ಅಂಕಿ-&ಅಂಶಗಳ ಅತ್ಯವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಸ್ವಯಂಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಏ.15ರಿಂದ ಮೇ 15ರವರೆಗೆ ಅಧಿಕಾರಿಗಳು ಮನೆ-&ಮನೆ ಸಮೀಕ್ಷೆಯನ್ನು ಮಾಡಲಿದ್ದು, ಪ್ರತಿಯೊಬ್ಬರು ಇದಕ್ಕೆ ಸಹಕರಿಸುವಂತೆ ತಿಳಿಸಿದರು.