ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಿಎ ಓರಿಯೆಂಟೇಷನ್ ಕಾರ್ಯಕ್ರಮವನ್ನು ಎನ್.ಬಿ.ಪ್ರದಿಪ್ ಕುಮಾರ್ ಉದ್ಘಾಟಿಸಿದರು. ಜೆ.ಪಿ.ಸುಧಾಕರ್, ಸಿ.ಎಸ್.ಪ್ರೇಮ್, ವೇದಮೂರ್ತಿ, ಡಿ.ಸಾಧನಾ ಮತ್ತಿತರರು ಇದ್ದರು.
- ಸಿಎ ಓರಿಯೆಂಟೇಷನ್ ಕಾರ್ಯಕ್ರಮ
- ಸಿಎ, ಸಿಎಸ್ ವೃತ್ತಿಪರ ಕೋರ್ಸ್ಗೆ ಬೇಡಿಕೆ ಹೆಚ್ಚು
- ವಿದ್ಯಾವಾಹಿನಿ ಸಮೂಹ ಸಂಸ್ಥೆ ಎನ್.ಬಿ.ಪ್ರದಿಪ್ ಕುಮಾರ್
ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯು ಕೃತಕ ಬುದ್ಧಿಮತ್ತೆಯ ಸವಾಲುಗಳನ್ನು ಮೀರಿ ಸಿಎ ಮತ್ತು ಸಿಎಸ್ನಂತಹ ವೃತ್ತಿಪರ ಕೋರ್ಸ್ಗಳು ಉತ್ತಮಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದಿಪ್ ಕುಮಾರ್ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಿಎ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಚಾರ್ಟಡೆ ಅಕೌಂಟೆಂಟ್ಗಳ ಸಂಖ್ಯೆ ಹೆಚ್ಚಬೇಕಿದೆ. ಪ್ರಸ್ತುತ ಜಸಂಖ್ಯೆಗೆ ಅಗತ್ಯವಿರುವಷ್ಟು ಸಿಎಗಳು ಇಲ್ಲ. ಅದು ಕಠಿಣವಾದ ಪರೀಕ್ಷೆ ಹೌದಾದರೂ ಗುರಿ ನಿಗದಿಪಡಿಸಿಕೊಂಡು ಶ್ರದ್ಧೆ ಹಾಗೂ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದರು.
ಚಾರ್ಟ್ಡ್ ಅಕೌಂಟೆನ್ಸಿ ದೇಶದಲ್ಲೇ ಅತ್ಯಂತ ಗೌರವಾನ್ವಿತ ಹಾಗೂ ಸವಾಲಿನ ವೃತ್ತಿಪರ ಕೋರ್ಸ್ಗಳಲ್ಲಿ ಒಂದಾಗಿದೆ. ಹಣಕಾಸು ನಿರ್ವಹಣೆ, ಲೆಕ್ಕಪತ್ರ, ತೆರಿಗೆ ಹಾಗೂ ಲೆಕ್ಕಪರಿಶೋಧನೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಸಿಎಗಳಿಗೆ ದೇಶ-ವಿದೇಶಗಳಲ್ಲಿ ಅಪಾರ ಉದ್ಯೋಗಾವಕಾಶಗಳಿವೆ. ಸಿಎ ಆಗಬೇಕೆಂದರೆ ಕೇವಲ ಬುದ್ಧಿವಂತಿಕೆ ಸಾಕಾಗುವುದಿಲ್ಲ. ಶಿಸ್ತು, ನಿರಂತರ ಅಧ್ಯಯನ, ಸಮಯ ನಿರ್ವಹಣೆ ಹಾಗೂ ದೃಢ ಸಂಕಲ್ಪ ಅತ್ಯಗತ್ಯ. ವಿದ್ಯಾರ್ಥಿಗಳು ಪ್ರಾರಂಭದಿಂದಲೇ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಿಕೊಂಡು ಪ್ರತಿದಿನ ನಿಯಮಿತವಾಗಿ ಅಭ್ಯಾಸ ಮಾಡಬೇಕು ಎಂದು ವಿದ್ಯಾನಿಧಿ ಕಾಲೇಜಿನ ವಾಣಿಜ್ಯ ವಿಭಾಗದ ಶೈಕ್ಷಣಿಕ ಸಂಯೋಜಕ ಜೆ.ಪಿ. ಸುಧಾಕರ್ ಹೇಳಿದರು.
ವಿ- ಟೆಕ್ನೋ ಅಕಾಡೆಮಿ ಸಿಇಒ ಸಿ.ಎಸ್.ಪ್ರೇಮ್, ಉಪ ಪ್ರಾಂಶುಪಾಲ ವೇದಮೂರ್ತಿ, ವಾಣಿಜ್ಯ ವಿಭಾಗದ ಸಂಯೋಜಕಿ ಡಿ.ಸಾಧನಾ ಉಪಸ್ಥಿತರಿದ್ದರು. ಶ್ರಾವ್ಯಾ ಪ್ರಾರ್ಥಿಸಿದರು. ತವನಿಧಿ ಸ್ವಾಗತಿಸಿ, ಖುಷಿ ಉಮೇಶ್ಗೌಡ ಕಾರ್ಯಕ್ರಮ ನಿರೂಪಿಸಿದರು.