ಶಿರಾ ತಾಲೂಕು ಮಾರನಗೆರೆಯಲ್ಲಿ ಘಟನೆ ನಡೆದ ಸ್ಥಳ. 
ತುಮಕೂರು

ಮಲತಂದೆ ಕೊಲೆಗೈದ ಮಗ

ಪ್ರಮುಖ ಮುಖ್ಯಾಂಶಗಳು

  • ಶಿರಾ ತಾಲೂಕು ಮಾರನಗೆರೆಯಲ್ಲಿ ಘಟನೆ
  • ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ
  • ಮಹರಾಷ್ಟ್ರ ಮೂಲದ ವ್ಯಕ್ತಿ ಕೊಲೆ
ಶಿರಾ: ತಾಯಿಗೆ ಹೊಡೆದ ಎಂಬ ಕಾರಣಕ್ಕೆ ಮಲತಂದೆಯನ್ನು ಮಗನೇ ಭೀಕರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮಾರನಗೆರೆಯಲ್ಲಿ ನಡೆದಿದೆ.
ನಿತಿನ್​ ತುಳಸಿರಾಮ(40) ಕೊಲೆಗೀಡಾದ ವ್ಯಕ್ತಿ. ಮೂಲತಃ ಮಹಾರಾಷ್ಟ್ರದ ರಾಯಗಡದ ನಿತಿನ್​ ಇದ್ದಿಲು ಕೆಲಸ ಮಾಡುತ್ತಿದ್ದು ಆತನ ಮಲಮಗ ಹರೀಶ್​ (20)ನಿಂದಲೇ ಹತ್ಯೇಗಿಡಾಗಿದ್ದಾನೆ.
ಮಂಗಳವಾರ ರಾತ್ರಿ ರೇಷನ್​ ವಿಚಾರವಾಗಿ ನಿತಿನ್​&ಯಶೋದಾ ನಡುವೆ ಜಗಳವಾಗಿದ್ದು ಈ ವೇಳೆ ಮಧ್ಯಪ್ರವೇಶಿಸಿದ ಹರೀಶ್​ ಹಲ್ಲೆ ನಡೆಸಿದ್ದಾನೆ. ಈ ಗಲಾಟೆಯಲ್ಲಿ ಯಶೋದಾಗೆ ನಿತಿನ್​ ಹೊಡೆದ ಎಂಬ ಕಾರಣಕ್ಕೆ ಕುಪಿತಗೊಂಡ ಹರೀಶ್​ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಶವದ ಮುಂದೆ ಕುಳಿತಿದ್ದ ಹರೀಶ್​ನನ್ನು ತಾವರೆಕರೆ ಪೊಲೀಸರು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಎರಡನೇ ವಿವಾಹ: 10 ವರ್ಷದ ಹಿಂದೆ ಪತಿಯನ್ನು ಕಳೆದಕೊಂಡಿದ್ದ ಯಶೋದಾ ಮೂರುವರ್ಷದ ಹಿಂದೆ ಇದ್ದಿಲು ಕೆಲಸಕ್ಕೆ ಬಂದಿದ್ದ ನಿತಿನ್​ನನ್ನು ಮದುವೆಯಾಗಿದ್ದರು. ಯಶೋದ ಮೊದಲ ಗಂಡನ ಮಕ್ಕಳಾದ ಹರೀಶ್​, ವಸಂತ್​ಗೆ ತಾಯಿ ಎರಡನೇ ಮದುವೆ ಆಗಿದ್ದು ಇಷ್ಟವಿರಲಿಲ್ಲ.