ತುಮಕೂರು ಎಸ್ಪಿ ಕೆ.ವಿ.ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ.  
ತುಮಕೂರು

ಸ್ಟಾರ್ಟರ್​ ಕದಿಯುತ್ತಿದ್ದ ಎಲೆಕ್ಟ್ರಿಷಿಯನ್​ !

ಪ್ರಮುಖ ಮುಖ್ಯಾಂಶಗಳು

  • 9.50 ಲಕ್ಷ ರೂ., ಮೌಲ್ಯದ 66 ಸ್ಟಾರ್ಟರ್​
  • ಫೇಸ್ ಬುಕ್​ ಪೇಜ್​ ಮೂಲಕ ಮಾರಾಟ
  • ಮಧುಗಿರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
ತುಮಕೂರು: ಕೊಳವೆಬಾವಿಗಳಿಗೆ ಅಳವಡಿಸಿರುವ ವಿವಿಧ ಕಂಪನಿಯ ಸ್ಟಾರ್ಟರ್​ಗಳನ್ನು ಕದಿಯುತ್ತಿದ್ದ ಎಲೆಕ್ಟ್ರಿಷಿಯನ್​ ಮಹೇಶ್​ (28)ರನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.
ಜು.8 ರಂದು ಮಧುಗಿರಿ ತಾಲೂಕಿನ ಪೆಮ್ಮಯ್ಯನಪಾಳ್ಯದ ಲೋಕೇಶ್​ ಎಂಬುವರ ಜಮೀನಿನಲ್ಲಿ ಬೋರೆವೆಲ್​ಗೆ ಅಳವಡಿಸಿದ್ದ ಸ್ಟಾರ್ಟರ್​ ಜತೆ ರೋಟೇಟಿಂಗ್​ ಸೈರನ್​ ಸಿಸಿ ಕ್ಯಾಮೆರಾ ಕೂಡ ಕಳವು ಮಾಡಲಾಗಿತ್ತು. ಕದ್ದ ಸ್ಟಾರ್ಟರ್​ಗಳಲ್ಲಿ ತನ್ನ ಫೇಸ್ ಬುಕ್​ ಪೇಜ್​ನಲ್ಲಿ ಕಡಿಮೆ ದರ ನಮೂದಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್​ನಲ್ಲಿನ ಸಿಸಿ ಕ್ಯಾಮೆರಾ ಕ್ಲೌಡ್​ ಫುಟೇಜ್ಆಧರಿಸಿ ಸಿಪಿಐ ಎಚ್​.ಜಿ.ಹನುಮಂತರಾಯಪ್ಪ ನೇತೃತ್ವದ ವಿಶೆಷ ತಂಡವು ಈ ಪ್ರಕರಣದ ಆರೋಪಿ ಮಹೇಶ್​ ನನ್ನು ಬಂಧಿಸಿ, 66 ವಿವಿಧ ಕಂಪನಿಯ 9.50 ಲಕ್ಷ ರೂ., ಮೌಲ್ಯದ ಸ್ಟಾರ್ಟರ್​ ಗಳು, 25 ಸಾವಿರ ಮೊತ್ತದ ಸಿಸಿ ಕ್ಯಾಮೆರಾ, ಕೃತ್ಯಕ್ಕೆ ಬಳಸಿದ ಒಮಿನಿ ವ್ಯಾನ್​, ಬೈಕ್​ ವಶಪಡಿಸಿಕೊಂಡಿದ್ದಾರೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.