ತುಮಕೂರು ತಾಲೂಕು ಹೆಗ್ಗೆರೆ ಲೆವೆಲ್​ ಕ್ರಾಸಿಂಗ್​ ಬಳಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಸಮಾರಂಭವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. 
ತುಮಕೂರು

ಪ್ರಧಾನಿಗಿಂತ ಚುರುಕು ಸೋಮಣ್ಣ!

ಪ್ರಮುಖ ಮುಖ್ಯಾಂಶಗಳು

  • ಹೆಗ್ಗೆರೆ ಆರ್​ಒಬಿ ಶಂಕುಸ್ಥಾಪನೆ ಕಾರ್ಯಕ್ರಮ
  • ಗ್ರಾಮಾಂತರ ಶಾಸಕ ಬಿ.ಸುರೇಶಗೌಡ
  • ಮೋದಿಗಿಂತ ಫಾಸ್ಟ್
ತುಮಕೂರು: ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮಾಡುವ ವೇಗದ ಕೆಲಸ ಪ್ರಧಾನಿಯಿಂದಲು ಆಗುವುದಿಲ್ಲ ಎಂದು ಶಾಸಕ ಬಿ.ಸುರೇಶಗೌಡ ಹೇಳಿ ಎಲ್ಲರ ಉಬ್ಬೇರುವಂತೆ ಮಾಡಿದರು.
ತಾಲೂಕಿನ ಹೆಗ್ಗೆರೆ ಬಳಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಸೋಮಣ್ಣ ಬಹಳ ಛಲವನ್ನಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಬಹಳ ಕೆಲಸ ಮಾಡಿದ್ದಾರೆ. ಅವರು ಸಚಿವರಾಗಿದ್ದು ನಾನೇ ಸಚಿವ ಆದಷ್ಟು ಖುಷಿಪಟ್ಟಿದ್ದೀನಿ ಎಂದರು.
ಒಂದು ವರ್ಷದಲ್ಲಿ ಜಿಲ್ಲೆಯ ಬಹುತೇಕ ರೈಲ್ವೆ ಲೆವೆಲ್​ ಕ್ರಾಸಿಂಗ್​ಗಳಲ್ಲಿ ರೈಲ್ವೆ ಓವರ್​ ಹಾಗೂ ಅಂಡರ್​ ಬ್ರಿಡ್ಜ್​ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರಿಂದಲು ಇಷ್ಟೊಂದು ವೇಗದ ಕೆಲಸ ಆಗಲ್ಲ. ಅಷ್ಟು ಕೆಲಸ ಮಾಡಿದ್ದಾರೆ. ನನೆಗುದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಗೆ ಸೋಮಣ್ಣ ಬಂದ ನಂತರ ಮುಕ್ತಿಕೊಟ್ಟಿದ್ದಾರೆ. ಅಭಿವೃದ್ಧಿಯ ಹರಿಕಾರ ಎಂದು ಹಾಡಿಹೊಗಳಿದರು.
ತುಮಕೂರು ನಗರದ ಭಾಗವಾಗಿ ಬೆಳೆಯುತ್ತಿರುವ ಹೆಗ್ಗೆರೆ ಗ್ರಾಪಂ ಅನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಸಚಿವ ಡಾ.ಜಿ.ಪರಮೇಶ್ವರ್​ ಉತ್ಸುಕರಾಗಿದ್ದಾರೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ತಮ್ಮ ಹುಟ್ಟೂರು ಹೆಗ್ಗೆರೆ ಅಭಿವೃದ್ಧಿ ಪಡಿಸಲಿ.
ಬಿ.ಸುರೇಶಗೌಡ
ಗ್ರಾಮಾಂತರ ಶಾಸಕ