BESCOM office inaugurated in Chi.na.halli
ಚಿಕ್ಕನಾಯಕನಹಳ್ಳಿ: ನಾಗರಿಕರ ಸೇವೆಗೆ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಗಳಿಗೆ ಅನುಕೂಲವಾಗಲೆಂದು 3.5 ಕೋಟಿ ರೂ. ವೆಚ್ಚದಲ್ಲಿ ಉತ್ತಮವಾದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದಲ್ಲಿ ನಿರ್ಮಿಸಿರುವ ಬೆಸ್ಕಾಂ ಕಚೇರಿ ಕಾರ್ಯಾರಂಭದ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಳೆಯ ಕಟ್ಟಡ ಚಿಕ್ಕದಾಗಿತ್ತು. ಅದ್ದರಿಂದ ಸುಸಜ್ಜಿತವಾದ ಅತ್ಯಾಧುನಿಕ ತಂತ್ರಜ್ನಾನದೊಂದಿಗೆ ವಿಶಾಲವಾದ ಕಡ್ಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡಿ ಅದರೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ, ಕರ್ತವ್ಯ ನಿರ್ವಹಿಸಿ ಎಂದರು. ನೂತನ ಕಚೇರಿಯ ಕಾರ್ಯಾರಂಭಕ್ಕೆ ಜೆ.ಸಿ.ಮಾಧುಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.