ಬಸವಣ್ಣ 
ತುಮಕೂರು

19, 20 ರಂದು ತುಮಕೂರಿನಲ್ಲಿ ಮಹಾತ್ಮರ ಜಂಟಿ ಜಯಂತೋತ್ಸವ

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಧರ್ಮ ಸಮ್ಮೇಳನ, ಜಂಟಿ ಉತ್ಸವ
  • ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ
  • ಜಗದ್ಗುರು ರೇಣುಕಾರ್ಯರು, ಬಸವಣ್ಣ, ಸಿದ್ದರಾಮೇಶ್ವರರ ಜಯಂತಿ ಆಚರಣೆ
ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಅಂಗಸಂಸ್ಥೆಗಳ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ಜಂಟಿ ಜಯಂತೋತ್ಸವದ ಅಂಗವಾಗಿ ಏ.19, 20 ರಂದು ನಗರದಲ್ಲಿ ವೀರಶೈವ ಧರ್ಮ ಸಮ್ಮೇಳನ ಹಾಗೂ ಮೂವರು ಮಹಾತ್ಮರ ಜಂಟಿ ಉತ್ಸವ ಹಮ್ಮಿಕೊಳ್ಳಲಾಗಿದೆ.
19ರಂದು ಸಂಜೆ 6 ಕ್ಕೆ ಜೆಸಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ವೀರಶೈವ ಧರ್ಮ ಸಮ್ಮೇಳನದಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ನಿವೃತ್ತ ಐಎಎಸ್​ ಅಧಿಕಾರಿ ಡಾ.ಸಿ. ಸೋಮಶೇಖರ್​ ಉದ್ಘಾಟಿಸುವರು. ಸಪ್ತಗಿರಿ ಕಾಲೇಜು ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ ಉಪನ್ಯಾಸ ನೀಡುವರು. ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್​ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಜಿ.ಎಸ್​. ಬಸವರಾಜು ಮತ್ತಿತರರು ಉಪಸ್ಥಿತರಿರುವರು.
20ರಂದು ಮಧ್ಯಾಹ್ನ 3.30ಕ್ಕೆ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ವೈಭವದ ಜಂಟಿ ಉತ್ಸವ ಏರ್ಪಡಿಸಲಾಗಿದೆ. ಎಸ್​ಐಟಿ ಆವರಣದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡುವರು.
ಕರಿಬಸವಸ್ವಾಮಿ ಮಠದ ಚನ್ನಬಸವರಾಜೇಂದ್ರ ಸ್ವಾಮೀಜಿ, ಅಟವಿ ಮಠದ ಅಟವಿ ಶಿವಲಿಂಗ ಸ್ವಾಮೀಜಿ, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಸಾನಿಧ್ಯವಹಿಸುವರು. ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ.ಬಿ. ಜ್ಯೋತಿಗಣೇಶ್​, ನಗರ ವೀರಶೈವ ಸಮಾಜ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್​.ಜಿ. ಚಂದ್ರಮೌಳಿ ಉಪಸ್ಥಿತರಿರುವರು.
ಮಹಾತ್ಮರ ಜಂಟಿ ಉತ್ಸವ: ಹೂವಿನ ಅಲಂಕೃತ ಮಂಟಪದಲ್ಲಿ ಮೂವರು ಮಹಾತ್ಮರ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಎಸ್​ಐಟಿ ಆವರಣದಿಂದ ಆರಂಭವಾಗಲಿರುವ ಉತ್ಸವ ಗಂಗೋತ್ರಿ ರಸ್ತೆ, ಎಸ್​ಐಟಿ, ಎಸ್​ಎಸ್​ ಪುರಂ ರಸ್ತೆ, ಡಾ. ರಾಧಾಕೃಷ್ಣ ರಸ್ತೆ, ಜಗದ್ಗುರು ರೇಣುಕಾಚಾರ್ಯ ವೃತ್ತ, ಬಿ.ಹೆಚ್​. ರಸ್ತೆ, ಎಂ.ಜಿ. ರಸ್ತೆ, ಸ್ವಾತಂತ್ರ ಚೌಕ, ಮಂಡಿಪೇಟೆ ಮೂಲಕ ಸಾಗಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಪನ್ನಗೊಳ್ಳಲಿದೆ.