ತುಮಕೂರಿನಲ್ಲಿ ನಡೆದ ಕಾರ್ಯಾಗಾರ 
ತುಮಕೂರು

ಲಿಂಗತಾರತಮ್ಯ ಕೊನೆಗಾಣಿಸುವಿಕೆ ಕುರಿತು ಜಾಗೃತಿ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ
  • ಸಾಂತ್ವಾನ, ಸಖಿ ಸಿಬ್ಬಂದಿಗಳಿಗೆ ಅರಿವು
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಅಂಗವಾಗಿ ಎನ್​ಆರ್​ಎಲ್​ಎಂ, ಸಾಂತ್ವಾನ, ಸಖಿ ಸಿಬ್ಬಂದಿಗಳಿಗೆ. "ಲಿಂಗತಾರತಮ್ಯ ಕೊನೆಗಾಣಿಸುವಿಕೆ' ವಿಷಯ ಕುರಿತು ಜಾಗೃತಿ ಕಾರ್ಯಗಾರ ಶುಕ್ರವಾರ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೇವಲ ಮುಟ್ಟಿಗೆ ಸೀಮಿತವಾಗಿಲ್ಲಾ ಅವಕಾಶ ಸಿಕ್ಕರೆ ಮುಗಿಲನ್ನೇ ಮುಟ್ಟುವರು ಎಂಬ ಮಾತಿನಂತೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಸಾಧಿಸುವ ಮೂಲಕ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲೂ ವೈಮನಸ್ಸಗಳನ್ನು ತೊರೆದು ಒಗ್ಗಟ್ಟಾಗಿದ್ದಾಗ ಮಾತ್ರ ಆರ್ಥಿಕ ಪ್ರಗತಿ ಸಾಧ್ಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕರೆ ನೀಡಿದರು. ದೈಹಿಕ ಆರೋಗ್ಯದ ಜತೆಗೆ ಆತ್ಮದ ಆರೋಗ್ಯ ಮುಖ್ಯವಾಗಿದ್ದು ಆದ್ದರಿಂದ ಸಕಾರತ್ಮಕವಾಗಿ ಸ್ವವಾಲಂಬನೆ ನಮ್ಮ ಮೇಲೆ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವುದು ಪ್ರಮುಖವಾಗಿರುತ್ತದೆ ಎಂದರು.
ಶಿರಸಿಯ ಅಸ್ಮಿತೆ ಪೌಂಡೇಶನ್​ ನಿರ್ದೇಶಕ ಡಾ.ಬಿ.ಎಸ್​.ಸಚಿನ್​ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಲಿಂಗತಾರತಮ್ಯವನ್ನು ಕೊನೆಗಾಣಿಸುವಿಕೆ ವಿಷಯ ಕುರಿತಾಗಿ ವಿಶೇಷ ಉಪನ್ಯಾಸದೊಂದಿಗೆ ಸಂವಾದ ನೆಡೆಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಂ.ಆರ್​.ದಿನೇಶ್​, ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಆರ್​.ಜಿ.ಪವಿತ್ರಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ, ಜಿಲ್ಲಾ ನಿರೂಪಣಾಧಿಕಾರಿ ಕೆ.ಎಚ್​.ಅಂಬಿಕಾ, ಮಹಿಳಾ ಸಬಲೀಕರಣ ಟಕದ ಎಚ್​.ಜಿ.ಶಶಿಧರ್​, ಎಚ್​.ಎಲ್​.ರಂಗನಾಥ್​ ಮತ್ತಿತರರು ಇದ್ದರು.