Attempted theft in broad daylight 
ತುಮಕೂರು

ಹಗಲು ಹೊತ್ತಿನಲ್ಲಿಯೇ ಕಳ್ಳತನಕ್ಕೆ ಯತ್ನ

ತುಮಕೂರು ಡೆಸ್ಕ್
ಹುಳಿಯಾರು: ನಗರದ ಜನನಿಬಿಡ ಪ್ರದೇಶದ ಮನೆಯೊಂದರಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ವಾಸವಿ ಶಾಲೆ ಸಮೀಪ ಜೀವನ್​ ಫಾಮ್​ರ್ ಮನೆ ಪಕ್ಕದಲ್ಲಿರುವ ಎಪಿಎಂಸಿ ಸಿದ್ದು ಮನೆಯಲ್ಲಿ ಭಾನುವಾರ ಮಧ್ಯಾಹ್ನ 2.30ರ ಸಮಯದಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬಾಗಿಲ ಚಿಲಕ ಹಾಗೂ ಬೀಗ ಮುರಿದು ಒಳನುಗ್ಗಿ ಬೀರು ಒಡೆದು ವಸ್ತುಗಳನ್ನು ಶೋಧಿಸಿದ್ದಾರೆ. ಆದರೆ ಮನೆಯಲ್ಲಿ ಇದ್ದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕಿನ ಲಾಕರ್​ನಲ್ಲಿ ಇಟ್ಟಿದ್ದರಿಂದ ಕಳ್ಳರಿಗೆ ಯಾವುದೇ ವಸ್ತುಗಳು ಸಿಗದ ಕಾರಣ ಸ್ಥಳದಿಂದ ತೆರಳಿದ್ದಾರೆ. ಸದಾ ಜನ ಸಂಚಾರವಿರುವ ರಸ್ತೆಯಲ್ಲೇ ಕಳ್ಳತನಕ್ಕೆ ಯತ್ನಿಸಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್​ ಠಾಣೆ ಪಿಎಸ್​ಐ ದಾಕ್ಷಾಯಣಮ್ಮ ಹಾಗೂ ಎಎಸ್​ಐ ವೆಂಕಟೇಶ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.