ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ-2026
- ಕರ್ನಾಟಕ ಕ್ರೀಡಾಕೂಟ 2025-26
- ಉಡುಪಿಯ ಮಾಧುರ್ಯಗೆ ಚಿನ್ನ ಸೇರಿ 2 ಪದಕ
ತುಮಕೂರು, ಜನವರಿ 20: ತುಮಕೂರಿನಲ್ಲಿನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26ರ ಅಥ್ಲೆಟಿಕ್ಸ್‌ನಲ್ಲಿ ಮೊದಲ ದಿನವೇ ಬೆಳಗಾವಿ ಅಥ್ಲೀಟ್‌ಗಳು 9 ಪದಕ ಗೆದ್ದು ಮೇಲುಗೈ ಸಾಧಿಸಿದರು. ಏತನ್ಮಧ್ಯೆ, ಉಡುಪಿಯ ಮಾಧುರ್ಯ ಒಂದು ಚಿನ್ನ ಸೇರಿ ಎರಡು ಪದಕ ಗೆದ್ದು ಬೀಗಿದರು.
ಕೂಟದ ಐದನೇ ದಿನವಾದ ಮಂಗಳವಾರ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಟೇಬಲ್ ಟೆನಿಸ್, ಲಾನ್ ಟೆನಿಸ್ ಮತ್ತು ಈಜು ಸ್ಪರ್ಧೆಗಳಲ್ಲಿ ಪದಕ ಬೇಟೆ ನಡೆದವು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ನಲ್ಲಿ ಬೆಳಗಾವಿ ಜತೆ ಆತಿಥೇಯ ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಥ್ಲೀಟ್‌ಗಳು ಒಂದೊಂದು ಸ್ಪರ್ಧೆಯಲ್ಲಿಎಲ್ಲಾ ಮೂರು ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ. ಉಡುಪಿಯ ಮಾಧುರ್ಯ ಡಿಸ್ಕಸ್ ಥ್ರೋನಲ್ಲಿ ಸ್ವರ್ಣ ಮತ್ತು ಶಾಟ್‌ಪುಟ್‌ನಲ್ಲಿಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಪುರುಷರ 400 ಮೀ. ಓಟದಲ್ಲಿ ಬೆಳಗಾವಿಯ ಓಂ ಸುನಿಲ್ ಚೌಹಾಣ್, ವೀರೇಶ್ ಬಿ. ಕಾಂಬ್ಳೆ ಮತ್ತು ಸ್ವಯಂ ದಿನೇಶ್ ಜುವೇಕರ್ ಸ್ವರ್ಣ, ಬೆಳ್ಳಿ, ಕಂಚಿನ ಪದಕ ಗೆದ್ದರು; ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರಾವಣಿ ಭಾಟೆ, ರೇಖಾ ಬಸಪ್ಪ ಪಿರೊಜಿ ಮತ್ತು ಗೀತಾ ಬಿ. ಚೌಕಾಶಿ ಕ್ರಮವಾಗಿ ಮೊದಲ 3 ಸ್ಥಾನ ಗೆದ್ದರು. ಈ ಮಧ್ಯೆ,ಪುರುಷರ 10 ಸಾವಿರ ಮೀ.ನಲ್ಲಿತುಮಕೂರಿನ ಟಿ.ಸಿ. ಸಂದೀಪ್, ಎಲ್. ರಘುವೀರ್ ಮತ್ತು ಎಚ್.ಎ. ದರ್ಶನ್ ಅನುಕ್ರಮವಾಗಿ ಪೋಡಿಯಂ ಸ್ಥಾನ ಗಳಿಸಿ ಗಮನ ಸೆಳೆದರು.
* ಪುರುಷರ ವಿಭಾಗದ ಇತರ ಸ್ಪರ್ಧೆಗಳ ವಿಜೇತರು
10,000 ಮೀ., ಓಟ: 1. ಟಿ.ಸಿ.ಸಂದೀಪ್ (34:38.5 ಸೆ. ತುಮಕೂರು), 2. ಎಲ್. ರಘುವೀರ್ (34:03.9 ಸೆ.ತುಮಕೂರು), 3. ಎಚ್.ಎ.ದರ್ಶನ್ (35:20.4 ಸೆ. ತುಮಕೂರು).
1500 ಮೀ., ಓಟ: 1. ಜೆ.ಆರ್.ಕಲ್ಯಾಣ್ (3.55 ಸೆ. ಬೆಂಗಳೂರು ನಗರ), 2. ವೈಭವ್ ಮಾರುತಿ ಪಾಟೀಲ್ (3:58.2 ಸೆ. ಬೆಳಗಾವಿ), 3. ಎಸ್.ಕಮಲಕಣ್ಣನ್ (3:58.9 ಸೆ. ಬೆಂಗಳೂರು ನಗರ)
110 ಮೀ., ಹರ್ಡಲ್ಸ್ : 1. ರತ್ನ ಗೌಡ ಪಾಟೀಲ್ (15.6 ಸೆ. ಬೆಂಗಳೂರು ನಗರ), 2. ಲಬೈಕ್ ನಲಬಂದ್ (15.9 ಸೆ. ಬೆಳಗಾವಿ), 3. ಸಂಜಯ್ ಈಶ್ವರ್ ಪಾಟೀಲ್ (16.2 ಸೆ. ಬೆಳಗಾವಿ)
4/100 ಮೀ., ರಿಲೆ: 1. ಉಡುಪಿ (41.5 ಸೆ.), 2. ದಕ್ಷಿಣ ಕನ್ನಡ (41.9 ಸೆ.), 3. ಶಿವಮೊಗ್ಗ (42.6 ಸೆ.)
ಟ್ರಿಪಲ್ ಜಂಪ್ : 1. ಯಶಸ್ ಆರ್. ಗೌಡ (15.13 ಮೀ. ಮಂಡ್ಯ), 2. ಜೆ.ಸಿ.ರಮೇಶ್ ನಾಯಕನ್ (14.80 ಮೀ. ಮೈಸೂರು), 3. ಬಿ.ಆರ್.ಯಶಸ್ (14.45 ಮೀ.ಬೆಂಗಳೂರು ನಗರ)
10,000 ಮೀ., ಓಟ: 1. ಎಸ್.ಡಿ.ಶಾಹಿನ್ (ಹುಬ್ಬಳ್ಳಿ), 2. ಯುವರಾಣಿ (ರಾಯಚೂರು) , 3. ಪ್ರವಲಿಕಾ (ಬೆಂಗಳೂರು ನಗರ)
1500 ಮೀ., ಓಟ: 1. ವಿ.ದೀಕ್ಷಾ (ಶಿವಮೊಗ್ಗ), 2. ಪ್ರಣತಿ (ಬೆಂಗಳೂರು ಗ್ರಾಮಾಂತರ), 3. ದೀಪಾ (ವಿಜಯಪುರ)
400 ಮೀ., ಓಟ: 1. ಶ್ರಾವಣಿ ಭಾಟೆ (55.7 ಸೆ. ದಕ್ಷಿಣ ಕನ್ನಡ ), 2. ರೇಖಾ ಬಸಪ್ಪ ಪಿರೊಜಿ (57.2 ಸೆ. ದಕ್ಷಿಣ ಕನ್ನಡ), 3. ಗೀತಾ ಬಿ. ಚೌಕಾಶಿ (57.9 ಸೆ. ದಕ್ಷಿಣ ಕನ್ನಡ)
4/100ಮೀ., ರಿಲೆ : 1. ಬೆಳಗಾವಿ (49.9ಸೆ.), 2. ದಕ್ಷಿಣ ಕನ್ನಡ (50.01 ಸೆ.), 3. ಮೈಸೂರು (51.6 ಸೆ.)
100 ಮೀ. ಹರ್ಡಲ್ಸ್: 1. ಇಶಾ ಎಲೆಜೆಬತ್ ರಂಜಿತ್ (14.6 ಸೆ. ಬೆಂಗಳೂರು ನಗರ), 2. ಅಪೂರ್ವ ಆನಂದ್ ನಾಯ್ಕ… (14.9 ಸೆ. ಬೆಳಗಾವಿ), ಸಾಕ್ಷಿ ಕ್ರಿಸ್ಟಿನಾ ಕರ್ಕಡಾ (15.9 ಸೆ. ದಕ್ಷಿಣ ಕನ್ನಡ)
ಜಾವೆಲಿನ್ ಥ್ರೋ: 1. ಕರಿಷ್ಮಾ ಎಸ್.ಸಾನಿಲ್ (49.40 ಮೀ. ದಕ್ಷಿಣ ಕನ್ನಡ), 2. ನಂದಾ ಪರಶುರಾಮ್ ಜಂಗಲಿ (29.30 ಮೀ. ಉಡುಪಿ),
ಶಾಟ್‌ಪುಟ್: 1. ಸಂಜನಾ ರೆಡ್ಡಿ (12.54 ಮೀ. ಬೆಂಗಳೂರು ನಗರ ), 2. ಮಾಧುರ್ಯ (11.22 ಮೀ. ಉಡುಪಿ), 3. ಆಕಾಂಕ್ಷ (11.09 ಮೀ. ಉಡುಪಿ)
ಡಿಸ್ಕಸ್ ಥ್ರೋ: 1. ಮಾಧುರ್ಯ (43.50 ಮೀ. ಉಡುಪಿ), 2. ಬಿ.ಸುಷ್ಮಾ (38.08 ಮೀ. ದಕ್ಷಿಣ ಕನ್ನಡ), 3. ಎಂ.ಬಿ.ಐಶ್ವರ್ಯ (37.58 ಮೀ. ದಕ್ಷಿಣ ಕನ್ನಡ)
ಟ್ರಿಪಲ್ ಜಂಪ್: 1. ಯು.ನಿತ್ಯಶ್ರೀ (11.92 ಮೀ. ಬೆಂಗಳೂರು ಗ್ರಾಮಾಂತರ), 2. ಸ್ಮಿತಾ ಕಾಕತ್ಕರ್ (11.36 ಮೀ.ಬೆಳಗಾವಿ)