ಕುಣಿಗಲ್ ತಾಲೂಕಿನ ಶ್ರೀ ಅಡವಿಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬಸವಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಭಾಗವಹಿಸಿದ್ದರು.
- ಸಿಎಂ ಡಿಕೆಶಿಗೆ ಸೋಮಣ್ಣ ಸಲಹೆ
- ಸ್ಯಾಟ್ ಲೈಟ್ ಟೌನ್ ನಿರ್ಮಿಸಿ
- ರೈತರಿಗೆ ಹಿಂಸೆ ಕೊಡೋದರಲ್ಲಿ ಅರ್ಥ ಇಲ್ಲ
ತುಮಕೂರು: ರೈತರು ಬೀದಿಗಿಳಿದು ಹೋರಾಟ ಮಾಡುತ್ತಿರುವುದರಿಂದ ಅವರಿಗೆ ಹಿಂಸೆ ಕೊಟ್ಟು ಈ ಯೋಜನೆ ಕೈಗೆತ್ತಿಕೊಳ್ಳುವುದು ಬೇಡ. ಉದ್ದೇಶಿತ ಬಿಡದಿ ಟೌನ್ ಶಿಪ್ ಕೈಬಿಡುವಂತೆ ಸಿಎಂ ಡಿ.ಕೆ.ಶಿವಕುಮಾರ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಲಹೆನೀಡಿದರು.
ನಗರದ ಕೋತಿತೋಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರ ಸ್ವಾಮಿ ಮೊದಲ ಬಾರಿ ಸಿಎಂ ಆಗಿದ್ದಾಗ ಈ ಯೋಜನೆ ಘೋಷಿಸಿದ್ದರು ಬಳಿಕ ಅದರ ಸಾಧಕಬಾಧಕ ನೋಡಿ ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಯೋಜನೆ ಕೈಬಿಟ್ಟಿದ್ದರು. ಈಗ ಹಠಕ್ಕೆ ಬಿದ್ದವರಂತೆ ಬಿಡದಿ ಟೌನ್ ಶಿಪ್ ಮಾಡುತ್ತೀನಿ ಅನ್ನುವುದರಲ್ಲಿ ಅರ್ಥವಿಲ್ಲ. ರೈತರಿಗೆ ಹಿಂಸೆಕೊಟ್ಟು ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಮತ್ತೊಮ್ಮೆ ಯೋಜನೆ ಜಾರಿ ಬಗ್ಗೆ ಪುನರ್ ಪರಿಶೀಲಿಸಿ ಕೈಬಿಡುವಂತೆ ಮನವಿ ಮಾಡಿದರು.
ನಮ್ಮ ಸರ್ಕಾರ ಇದ್ದಾಗ ಸೂರ್ಯನಗರ 1,2,3 ಹಂತ ಮಾಡಿದ್ದೇವೆ. ನಾನು ವಸತಿ ಸಚಿವನಾಗಿದ್ದೆ, ನಿಮ್ಮ ಸಹೋದರ ಲೋಕಸಭಾ ಸದಸ್ಯರಾಗಿದ್ದರು. ಅಲ್ಲೇ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕು ಚಾಲನೆ ನೀಡಲಾಗಿದೆ. ಇದು ಬಿಜೆಪಿ ಸರ್ಕಾರದ ಶ್ರಮ. ಆಗ ಒಬ್ಬೇ ಒಬ್ಬ ರೈತ ನಮಗೆ ಅನ್ಯಾಯವಾಗಿದೆ ಅಂತ ಹೇಳಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಲ್ಲದೆ ನಿಮ್ಮ ಪಕ್ಷದವರೇ ಈ ಯೋಜನೆ ವಿರೋಧಿಸಿದ್ದರೆ. ಜನರ ಒತ್ತಾಯಕ್ಕೆ ಮಣಿಯೋದಕ್ಕಿಂತ ದೊಡ್ಡತನ ಮತ್ತೊಂದಿಲ್ಲ. ಇತಿಹಾಸದಲ್ಲಿ ಉಳಿದುಕೊಳ್ಳುತ್ತೀರಾ. ಲವಲವಿಕೆಯಿಂದ ಕೆಲಸ ಮಾಡುತ್ತಿದ್ದೀರಾ, ಬಿಡದಿ ಟೌನ್ ಶಿಪ್ ಬದಲು ಸ್ಯಾಟ್ಲೈಟ್ ಟೌನ್ಗಳನ್ನು ನಿರ್ಮಿಸಿ. ನಿಮಗೂ, ರಾಜ್ಯಕ್ಕು ಒಳ್ಳೆಯದು ಎಂದರು.
ಅಶೋಕ್ ಭೇಟಿ: ವಿಪಕ್ಷ ನಾಯಕ ಆರ್.ಅಶೋಕ್ ನನ್ನದು 40 ವರ್ಷದ ಸ್ನೇಹ. ನಾವಿಬ್ಬರು ಒಂದೇ ಪಕ್ಷದವರು. ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದಕ್ಕೆ ಬೇರೆಯರನ್ನ ನಾವು ಕೇಳಿ ಹೋಗಬೇಕೆಂಬ ಭಾವನ ಇಲ್ಲ. ನಾನು ಕೂಡ ಭಾರತ ಸರ್ಕಾರದ ಮಂತ್ರಿ ಇದ್ದೇನೆ. ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ಗೌಡ, ಜಿಪಂ ಸಿಇಒ ಬಿ.ವಿ. ಅಶ್ವಿಜ, ದಿಶಾ ಸಮಿತಿ ಸದಸ್ಯ ವೈ.ಎಚ್.ಹುಚ್ಚಯ್ಯ, ಪಾಲಿಕೆ ಮಾಜಿ ಸದಸ್ಯೆ ರೂಪಶ್ರೀ, ಡಿಎಚ್ಒ ಡಾ. ಚಂದ್ರಶೇಖರ್, ತಹಸೀಲ್ದಾರ್ ರಾಜೇಶ್ವರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್, ಡಾ. ಮೋಹನ್, ಡಾ. ಲಕ್ಷಿ$್ಮಕಾಂತ್ ಮತ್ತಿತರರು ಇದ್ದರು.
ಅಯೋಧ್ಯೆ ಶ್ರೀರಾಮಮಂದಿರದಲ್ಲಿನ ಕಾಣಿಕೆ ದುರಪಯೋಗ ತನಿಖೆಗೆ ಎಸ್ಐಟಿ ರಚಿಸಲಾಗಿದೆ.
7-8 ಜನರನ್ನು ಈಗಾಗಲೇಬಂಧಿಸಲಾಗಿದೆ. ಅವರು ಎಷ್ಟೇ ದೊಡ್ಡವರಾದರೂ ಕಾನೂನಿನಡಿ ಕ್ರಮಆಗುತ್ತೆ. ಆದರೆ ಈ ತರಹದ ಘಟನೆಗಳು ದೇಶದ ಇತಿಹಾಸಕ್ಕೆ ಕಪು$್ಪ ಚುಕ್ಕಿ ಇಟ್ಟಂತೆ. ಉತ್ತರ ಪ್ರದೇಶದ ಸಿಎಂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ತಪ್ಪಿತಸ್ಥರಿಗೆ ಶಿೆ ಆಗಲಿದೆ.
ಶಾಸಕ ಪ್ರದಿಪ್ ಈಶ್ವರ್ನನ್ನ ಈವರೆಗೆ ನಾನು ನೋಡಿಲ್ಲ. ಯಂಗ್ಸ್ಟರ್ ಇದ್ದಾನೆ, ಏನ್ರೀ ಮಾತಾಡ್ತಾನೆ ಮನೆ ಕಾಯೋಗ. ಪರಿಶ್ರಮ ನೀಟ್ ಅಕಾಡೆಮಿ ಮಾಡಿದ್ದು ಮಕ್ಕಳಿಗೆ ಇದೇನಾ ಹೇಳಿಕೊಡುವುದು. ರಾಜಕಾರಣ ಮುಳ್ಳಿನ ಹಾಸಿಗೆ ಇದ್ದಂತೆ. ಭಾಷೆ ಹಿಡಿತದಲ್ಲಿರಬೇಕು. ಜನಪ್ರತಿನಿಧಿಗಳು ಈ ರೀತಿ ನಡೆದುಕೊಂಡರೆ ಹೇಗೆ. ಎಚ್ಡಿಕೆ ಇರಲಿ, ಇನ್ನೊಬ್ಬರು ಇರಲಿ ರಾಜ್ಯಕ್ಕೆ ಅವರ ಕೊಡುಗೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವರ ಜತೆ ಸಂರ್ಷ ಬಿಟ್ಟು ಒಳ್ಳೆತನದಿಂದ ನಡೆದುಕೊಳ್ಳುವುದನ್ನು ಕಲಿತುಕೊಳ್ಳುವಂತೆ ಸಚಿವ ಸೋಮಣ್ಣ ಕಿವಿಮಾತು ಹೇಳಿದರು.