ತುಮಕೂರಿನ ಬಹುಮುಖಿ ಬಳಗದಿಂದ ವತಿಯಿಂದ ಕವಯತ್ರಿ ದೀಪದಮಲ್ಲಿ ಅವರಿಗೆ ಅಪ್ಪ ಪ್ರಶಸ್ತಿಯನ್ನು ಡಾ.ಬಂಜಗೆರೆ ಜಯಪ್ರಕಾಶ್​ ಪ್ರದಾನ ಮಾಡಿದರು. ಬಾ.ಹ.ರಮಾಕುಮಾರಿ, ಮಲ್ಲಿಕಾಬಸವರಾಜು, ಹಡವನಹಳ್ಳಿ ವೀರಣ್ಣಗೌಡ, ಡಾ.ರವಿಕುಮಾರ್​ ನೀಹ, ಕಪಿಲ ಪಿ.ಹುಮನಾಬಾದ್​, ಮಂಜುನಾಥ್​ ದಂಡಿನಶಿವರ ಮತ್ತಿತರರು ಇದ್ದರು.  
ತುಮಕೂರು

ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಶಸ್ತಿಗಳು ಬಂಜಗೆರೆ ಬೇಸರ

ಜಗನ್ನಾಥ್ ಕಾಳೇನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಶಸ್ತಿಗಳು
  • ಚಿಂತಕ, ಲೇಖಕ ಡಾ.ಬಂಜಗೆರೆ ಜಯಪ್ರಕಾಶ್
  • ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ
ತುಮಕೂರು: ಸರ್ಕಾರದ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿದ್ದು ಇಂತಹ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು ತುಂಬಾ ಎಚ್ಚರಿಕೆವಹಿಸಬೇಕು ಎಂದು ಚಿಂತಕ, ಲೇಖಕ ಡಾ.ಬಂಜಗೆರೆ ಜಯಪ್ರಕಾಶ್​ ಹೇಳಿದರು.
ನಗರದ ಕನ್ನಡ ಭವನದಲ್ಲಿ ಬಹುಮುಖಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ 2ನೆ ವರ್ಷದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಶಸ್ತಿಗಾಗಿ ರಾಜಕಾರಣಿಗಳ ಹಿಂದೆ ಅಲೆಯುವಂತಾಗಬಾರದು. ಹಾಗೆಯೇ ಕಲಾವಿದರು ಮಾಶಾಸನಕ್ಕೆ ಅರ್ಜಿ ಸಲ್ಲಿಸಿ, ಇಲಾಖೆಗಳ ಬಾಗಿಲಿಗೆ ಎಡತಾಕಬಾರದು. ಇದು ನಮ್ಮ ನೈತಿಕತೆಯ ಪ್ರಶ್ನೆ ಎಂದವರು ಎಚ್ಚರಿಸಿದರು.
ಸರ್ಕಾರದ ಆಶ್ರಯ ಬೇಡುವ, ಪ್ರಶಸ್ತಿಗಾಗಿ ಅರ್ಜಿ ಹಾಕುವ ಮಂದಿ ಹೆಚ್ಚುತ್ತಿದ್ದು, ಸಾಹಿತಿಗಳು, ಕಲಾವಿದರು ಇಂತಹ ಪ್ರಯತ್ನಗಳಿಂದ ದೂರ ಇರಬೇಕು. ಸಾಹಿತಿಗಳಿಗೆ, ಕವಿ, ಕಲಾವಿದರಿಗೆ ತಮ್ಮದೇ ಆದ ಒಂದು ಸಾಂಸ್ಕತಿಕ ಐತಿಹ್ಯವಿದೆ. ಜನಪರವಾಗಿ ನಿಲ್ಲುವ ಮತ್ತು ಬದುಕುವ ಸಾಮರ್ಥ್ಯವಿದೆ. ಬದುಕಲು ತಮ್ಮದೇ ಆದ ದಾರಿಗಳಿವೆ. ಇಂತಹ ದಾರಿಗಳನ್ನು ಬಿಟ್ಟು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಗೋಗರೆಯುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಕಸಾಪ ಮಾಜಿ ಅಧ್ಯೆ ಬಾ.ಹ.ರಮಾಕುಮಾರಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಮೈಸೂರಿನ ಲೇಖಕ ಸತೀಶ್​ ಜವರೇಗೌಡ, ಬಹುಮುಖಿ ಬಳಗದ ಪ್ರಧಾನ ಸಂಚಾಲಕ ಹಡವನಹಳ್ಳಿ ವೀರಣ್ಣಗೌಡ, ಸಂಚಾಲಕ ಮಂಜುನಾಥ್​ ದಂಡಿನಶಿವರ, ಎಚ್​.ವಿ.ನಾಗರಾಜು ಉಪಸ್ಥಿತರಿದ್ದರು.
ಮತ್ತಿಹಳ್ಳಿ ಗಂಗಣ್ಣ ಪ್ರಾರ್ಥಿಸಿದರು. ತೀರ್ಥಕುಮಾರ್​ ಸ್ವಾಗತಿಸಿ, ಎಂ.ಎಸ್​.ಜಯಣ್ಣ ವಂದಿಸಿದರು. ಆರ್​.ವಿ.ಗೋಪಾಲ್​ ನಿರೂಪಿಸಿದರು.

ಅಪ್ಪ ಪ್ರಶಸ್ತಿ ತಲಾ 5 ಸಾವಿರ

ಡಾ.ರವಿಕುಮಾರ್​ ನೀಹ ಅವರ ಅವು ಅಂಗೇ' ಕೃತಿ, ದೀಪದಮಲ್ಲಿ ಅವರ ಹುಣಸೆ ಚಿಗುರು, ಕಪಿಲ ಪಿ.ಹುಮನಾಬಾದ್​ ಅವರ "ಬಣಮಿ' ಕೃತಿಗಳನ್ನು "ಅಪ್ಪ ಪ್ರಶಸ್ತಿ'ಗೆ ಆಯ್ಕೆ ಮಾಡಿದ್ದು ಮೂವರು ಲೇಖಕರಿಗೆ ಪ್ರಶಸ್ತಿ, ತಲಾ 5 ಸಾವಿರ ನಗದು ನೀಡಿ ಗೌರವಿಸಲಾಯಿತು.