ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ತುಮಕೂರಿನಲ್ಲಿ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
- ಪ್ರತಿಭಟನಕಾರ ಬಂಧನ ಬಿಡುಗಡೆ
- ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನೆ
- ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ
ತುಮಕೂರು: ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ಜಾರಿ ವಿರೋಧಿಸಿ, ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಪುನರ್ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಗರದ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು, ಕಾರ್ಮಿಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು.
ಅಂತರಸನ ಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಬಾಗಿಯಾದರು. ಅಂಗನವಾಡಿ, ಬಿಸಿಯೂಟ. ಅಶಾ, ಮುನಿಸಿಪಲ್ , ಅಸ್ವತ್ರೆ, ಹಮಾಲಿ ಕಾರ್ಮಿಕರು. ಫುಟ್ಪಾತ್ ವ್ಯಾಪಾರಿಗಳು. ಬ್ಯಾಂಕ್ ನೌಕರರು. ವಿಮಾ ನೌಕರರು. ಮುಷ್ಕರದಲ್ಲಿ ಭಾಗಿಯಾಗಿದ್ದರು.
ಗುರುವಾರ ಟೌನ್ಹಾಲ್ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಪ್ರತಿಭಟನಾನಿರತರು ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯಿರಿ, ಕನಿಷ್ಟ ವೇತನ ಮಾಸಿಕ 41ಸಾವಿರ ನಿಗಧಿ ಮಾಡಿ, ನಿಗದಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಕಾಯಂ ಕೆಲಸಗಳೆ ಇಲ್ಲದಂತೆ ಮಾಡುವುದನ್ನು ವಿರೋಧಿಸಿ, ವಿದ್ಯುತ್ ಬಳಕೆದಾರರಿಗೆ ವಿಪರೀತ ಬೆಲೆ ಏರಿಕೆಗೆ ಕಾರಣವಾಗುವ ವಿದ್ಯುತ್ ಖಾಸಗಿಕರಣಕ್ಕೆ ದಾರಿ ಮಾಡುವ ವಿದ್ಯುತ್ ಕಾಯಿದೆ ವಿರೋಧಿಸಿ. ರೈತರ ಸ್ವಾವಲಂಬನೆಗೆ ಕುತ್ತು ತರುವ ಬೀಜ ಮಸೂದೆ ವಿರೋಧಿಸಿ , ಬಲವಂತದ ಭೂಸ್ವಾಧಿನ, ಬಗೇರ್ ಹುಕುಂ ಸಾಗುವಳಿದಾರರ ಪ್ರಶ್ನೆ ಇತ್ಯಾರ್ಥಗೊಳಿಸುವಂತೆ ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮೆರವಣಿಗಗೆ ಚಾಲನೆ ನೀಡಿದರು.
ಜೆಸಿಟಿಯು ಜಿಲ್ಲಾ ಸಂಚಾಲಕ ಕಂಬೇಗೌಡ, ಎಐಯುಟಿಯುಸಿ ಜಿಲ್ಲಾ ಸಂಚಾಲಕಿ ಮಂಜುಳ ಗೋನಾವರ, ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್, ಎಐಟಿಯುಸಿ ಜಿಲ್ಲಾ ಕಾರ್ಯಧ್ಯಕ್ಷ ಗಿರೀಶ್, ಗೋವಿಂದರಾಜು, ರಂಗನಾಥ್, ಹೋರಾಟದಲ್ಲಿ ಸಿಐಟಿಯು ಷಣ್ಮಗಪ್ಪ. ಸುಜಿತ್ ನಾಯಕ್, ರಂಗಧಾಮಯ್ಯ, ಕರ್ನ ಲಿಬರ್ಸ್ ಕಾರ್ಮಿಕರ ಸಂಘ ಶಿವಕುಮಾರ್ ಸ್ವಾಮಿ. ಫೀಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತುರಾಜ್, ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಗೌರಮ್ಮ. ಗಂಗಮ್ಮ. ಜಬಿನಾ, ಹಮಾಲಿ ಕಾರ್ಮಿಕರ ಸಂಘ ನಾಗರಾಜು. ಗ್ರಾಮ ಪಂಚಾಯತ್ ನೌಕರರ ಸಂಘ ನಾಗೇಶ, ಯೋಗಿಶ್. ವಿಶಾಕ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್ ಭಾಗವಹಿಸಿದ್ದರು.