- ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ
- ಮೋದಿ ಹೊಗಳಿದ್ದಲ್ಲ ವಾಸ್ತಾವಾಂಶ ಹೇಳಿದ್ದು
- ಸಾಧನಾ ಸಮಾವೇಶ ಪೂರ್ವ ಭಾವಿ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ
ಮಧುಗಿರಿ: ಇಂದಿರಾಗಾಂಧಿ ನಂತರ ಯಾರಾದರೂ ಮಾಸ್ ಲೀಡರ್, ಜನಾಕರ್ಷಿಸುವ ನಾಯಕರಿದ್ದರೆ ಅದು ನರೇಂದ್ರ ಮೋದಿ! ಹೀಗೆಂದವರು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಆಫ್ ಕೋರ್ಸ್, ಇಂದಿರಾ ಗಾಂಧಿಯವರ ನಂತರ ಮಾಸ್ ಲೀಡರ್ ಯಾರಾದರೂ ಇದ್ದರೆ ಅದು ಮೋದಿನೇ. ಹಾಗೆಂದು ನಾನು ಮೋದಿಯನ್ನು ಹೊಗಳುತ್ತಿಲ್ಲ, ವಾಸ್ತವಾಂಶ ಹೇಳುತ್ತಿದ್ದೇನೆ ಎಂದರು.
ರಾಜಕಾರಣದಲ್ಲಿ ಪಾಪುಲಾರಿಟಿ (ಜನಪ್ರಿಯತೆ) ಯಾರಿಗೂ ಶಾಶ್ವತ ಅಲ್ಲ. ಇದನ್ನು ಮೊದಲು ಅವರು(ಮೋದಿ) ಅರಿಯಬೇಕು. ಈ ಹಿಂದೆ ಇಂದಿರಾಗಾಂಧಿ ಅವರ ಹೆಸರು ಹೇಳಿಕೊಂಡೇ 200 ಜನ ಎಂಪಿಗಳು ಗೆಲ್ಲುತ್ತಿದ್ದರು. ಆದರೆ ಅವರೇ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಸ್ವಯಂ ಸೋಲು ಅನುಭವಿಸಬೇಕಾಯಿತು. ನೀವು ಮೋದಿ ಹೊಗಳಬಿಟ್ಟವ್ನೇ ಅಂತ ಬರೆದರೆ ನಮ್ಮವರೆಲ್ಲ ನನ್ನ ಮೇಲೆ ಕಣ್ಣು ಕೆಂಪಗೆ ಮಾಡ್ಕೋತಾರೆ. ನಾನು ವಾಸ್ತವಾಂಶವನ್ನ ಹೇಳೋನು. ಮೋದಿ ಈಗ ಆಕಾಶದಲ್ಲಿ ಇದ್ದಾರೆ, ಭೂಮಿಗೆ ಬಂದಾಗ ಕಷ್ಟ, ಸುಖ ಎನು ಅಂತ ಗೊತ್ತಾಗುತ್ತೆ ಎಂದು ತಮ್ಮದೇ ಶೈಲಿಯಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವಿಶ್ಲೇಷಿಸಿದರು.