ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಪ್ರೊ.ಎಸ್.ದೇವರಾಜಪ್ಪ, ವಿದ್ಯಾಪರಿಷತ್ ಸದಸ್ಯ ಪ್ರೊ.ಎಂ.ಕೊಟ್ರೇಶ್ ಹಾಗೂ ವಿವಿ ಕೋರ್ಟ್ ಸದಸ್ಯ ಪ್ರೊ.ಕೆ.ಜಿ.ಪರಶುರಾಮ್ ತುಮಕೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ತುಮಕೂರು: ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಿಯುಇಟಿ ಮೂಲಕ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭಿಸಿದೆ.
ಈ ಬಗ್ಗೆ ನಗರದಲ್ಲಿ ಶನಿವಾರದ ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಪ್ರೊ.ಎಸ್.ದೇವರಾಜಪ್ಪ, ವಿದ್ಯಾಪರಿಷತ್ ಸದಸ್ಯ ಪ್ರೊ.ಎಂ.ಕೊಟ್ರೇಶ್ ಹಾಗೂ ವಿವಿ ಕೋರ್ಟ್ ಸದಸ್ಯ ಪ್ರೊ.ಕೆ.ಜಿ.ಪರಶುರಾಮ್ ಜಂಟಿ ಸುದ್ದಿಗೊಷ್ಠಿ ನಡೆಸಿ ವಿದ್ಯಾರ್ಥಿಗಳು ಸದುಪಯೋಗ ಪಡೆಯಬಹುದು ಎಂದು ವಿವರ ಒದಗಿಸಿದರು
ಎಂ.ಎ ಇಂಗ್ಲಿಷ್, ಹಿಂದಿ, ಕನ್ನಡ, ಭಾಫಿಾಶಾಸ್ತ್ರ, ಜಾನಪದ ಮತ್ತು ಬುಡಕಟ್ಟುಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ, ಎಂಬಿಎ, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ, ಮನೋವಿಜ್ಞಾನ, ಸಮಾಜಕಾರ್ಯ, ಭೂಗೋಳ, ಭೂವಿಜ್ಞಾನ, ಎಂಸಿಎ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪವರ್ ಅಂಡ್ಎನರ್ಜಿ ಇಂಜಿನಿಯರಿಂಗ್, ಎಂ.ಟೆಕ್ ಅರ್ಎಫ್& ಮೈಕ್ರೋವೇವ್ಇಂಜಿನಿಯರಿಂಗ್, ಎಲ್ಎಲ್ಎಂ, ಬಿ.ಇಡಿ, ಎಂ.ಇಡಿ, ಎಂಪಿಎ ಹಿಂಸ್ತುಸ್ಥಾನಿ ಗಾಯನ, ಎಂಪಿಎ ಇನ್ಸ್ಟ್ರುಮೆಂಟಲ್ (ಹಿಂಸ್ತುಸ್ಥಾನಿ ತಬಲಾ), ಮಾಸ್ಟರ್ ಆಫ್ ವಿಸುವಲ್ ಆರ್ಟ್ಸ (ಪೆಂಟಿಂಗ್), ಎಂ.ಕಾಂ (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ), 20 ಎಂಎಸ್ಸಿ ಜೆನೆಟಿಕ್ಸ್ ಮತ್ತು ಜೀನೋಮಿಕ್, ಎಂಎಸ್ಸಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ, ಎಂ. ಟೆಕ್ ಎಐ ಮತ್ತು ಎಂಎಲ್, ಅಂಕಿಅಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದೆ ಎಂದರು.
ವಿವಿಯಲ್ಲಿ ಪ್ರವೇಶಾತಿಯನ್ನು ಎನ್ಟಿಎ&ಸಿಯುಇಟಿ ಮೂಲಕ ಮೂಲಕ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಡಿಸೆಂಬರ 14 ರಿಂದ ಪ್ರಾರಂಭವಾಗಿದೆ. ಪದವಿ ಅಂತಿಮ ಸೆಮಿಸ್ಟರ್ನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ಅರ್ಹವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ. ಜ.14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ವೆಬ್ಸೈಟ್ ನೋಡಬಹುದು.