Add yoga to your routine 
ತುಮಕೂರು

ದಿನಚರಿಯಲ್ಲಿ ಯೋಗ ಸೇರಿಸಿ

ಬುಕ್ಕಾಪಟ್ಟಣ: ಯೋಗ ಜಗತ್ತಿಗೆ ಭಾರತ ನೀಡಿದ ಅತ್ಯುನ್ನತ ಉಡುಗೊರೆಯಾಗಿದೆ ಎಂದು ಶ್ರೀ ಶಾರದಾ ಇಂಟರ್​ ನ್ಯಾಷನಲ್​ ಕೇಂಬ್ರಿಡ್ಜ್​ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಬಾಲಕೃಷ್ಣ ಅಭಿಪ್ರಾಯಪಟ್ಟರು.
ಶಿರಾ ತಾಲೂಕು, ಬುಕ್ಕಾಪಟ್ಟಣ ಹೋಬಳಿಯ ಹೂಯಿಲ್​ ದೊರೆ ಶ್ರೀ ಶಾರದಾ ಇಂಟರ್​ ನ್ಯಾಷನಲ್​ ಕೇಂಬ್ರಿಡ್ಜ್​ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯೋಗದಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ದೈಹಿಕ ಸಹಿಷ್ಣತೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನು ಸಹ ಯೋಗವನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಹಾಗೂ ಅಂಗ ಸಾಧನೆಯ ಮೂಲಕ ಯಶಸ್ಸು ಕಾಣಬಹುದು ಎಂದು ಸಲಹೆ ನೀಡಿದರು.
ಶ್ರೀ ಅಯ್ಯ ಆಂಜನೇಯ ಹೆಲ್ತ್​ ಆ್ಯಂಡ್​ ಚಾರಿಟೇಬಲ್​ ಟ್ರಸ್ಟ್​ ಸಂಸ್ಥಾಪಕ ಅಧ್ಯಕ್ಷ ರಂಗನಾಥ್​ ಮಾತನಾಡಿ, ಮನುಷ್ಯ ಎಷ್ಟು ದಿನ ಬದುಕಿರುತ್ತಾನೆ ಎಂಬುದು ಮುಖ್ಯವಲ್ಲ, ಯಾವ ರೀತಿ ಜೀವನ ಶೈಲಿಯ ಮೂಲಕ ಬದುಕಿದ್ದಾನೆ ಎಂಬುದು ಮುಖ್ಯವಾಗುತ್ತದೆ ಅವರ ಸಾಧನೆ ಸತ್ತ ಮೇಲೆ ಸಹ ಅವರನ್ನು ಬದುಕಿರುವಂತೆ ಮಾಡುತ್ತದೆ. ಉತ್ತಮ ಜೀವನ ಶೈಲಿಗೆ ಯೋಗ ಸಾಧನೆ ಅತಿಮುಖ್ಯ ಎಂದರು.
ಪ್ರಾಂಶುಪಾಲ ನವೀನ್​ ಕುಮಾರ್​, ಬಾಲೋದ್ಯಾನ ಮುಖ್ಯಶಿಕ್ಷಕಿ ಕಾವ್ಯಾ ಮಹೇಶ್​, ದೈಹಿಕ ಶಿಕ್ಷಣ ಶಿಕ್ಷಕರಾದ ಕಿರಣ್​ ಕುಮಾರ್​, ಮಹೇಶ್​ ಗೌಡ ಮತ್ತಿತರರು ಇದ್ದರು.