A healthy society is possible if it is subject to criticism. 
ತುಮಕೂರು

ವಿಮರ್ಷೆಗೆ ಒಳಪಟ್ಟರೆ ಆರೋಗ್ಯಕರ ಸಮಾಜ ಸಾಧ್ಯ

ತಿಪಟೂರು: ಸರ್ಕಾರ ವಿಮರ್ಷೆಗೆ ಪಾತ್ರವಾದಾಗ ಸುಸ್ತಿರ ಮತ್ತು ಆರೋಗ್ಯಕರ ಸಮಾಜ ನಿಮಾರ್ಣ ಸಾಧ್ಯ ಎಂದು ರಂಗಕರ್ಮಿ, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್​ ಹೇಳಿದರು.
ನಗರದ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸತಿಕ ಸಂಘದಿಂದ ಶನಿವಾರ ಆಯೋಜಿಸಿದ್ದ ಸಂಘದ ಲಾಂಚನ ಬಿಡುಗಡೆ ಮತ್ತು ಕಲ್ಪತರು ಕನ್ನಡ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ಗುರುತು ಬಹುಮುಖ್ಯ, ಗುರುತಿಲ್ಲದಿದ್ದರೆ ಅನಾಮಿಕರಾಗುತ್ತೇವೆ. ಸದರಿ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸತಿಕ ಸಂಘ ಸ್ಥಾಪನೆಯಾಗಿ 25 ವರ್ಷಗಳ ನಂತರ ತನ್ನ ಗುರುತಿನ ಲಾಂಚನ ಬಿಡುಗೆಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗುರುತು ಸಾಮಾನ್ಯ ಸಂಗತಿಯಲ್ಲ. ಇಂದು ಗುರುತಿನ ಬಿಕ್ಕಟ್ಟು ರಾಷ್ಟ ಮಟ್ಟದಲ್ಲಿ ಚರ್ಚೆ ಮತ್ತು ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಗುರುತು ವಿವೇಚನೆಯಿಂದ ನಿರ್ಣಾಯಕವಾಗಬೇಕು. ಆತ್ಮಜ್ಞಾನವೋ, ಲೋಕಜ್ಞಾನವೋ, ಲೋಕಾನುಭವವೋ, ಈ ಮೂಲಕ ತಮ್ಮ ಲೋಕನಿಷ್ಠೆ ಪ್ರದರ್ಶಿಸಲು ಪ್ರಜಾಪ್ರಭುತ್ವದಲ್ಲಿ ಇರುವ ಏಕೈಕ ಅವಕಾಶವೆಂದರೆ ಅದು ನಮ್ಮ ಗುರುತಿನ ಚೀಟಿಯ ಮೂಲಕ ನಾವು ಚಲಾಯಿಸುವ ಮತ ಎಂದರು.
ನಿವೃತ್ತ ಪ್ರಾಂಶುಪಾಲ ಕೆ.ಎನ್​.ರೇಣುಕಯ್ಯ ಮಾತನಾಡಿ, 2001ರಲ್ಲಿ ಪ್ರಾರಂಭವಾದ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸತಿಕ ಸಂಘ ಪ್ರಾರಂಭದಿಂದಲೂ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಕಳೆದ 5 ವರ್ಷಗಳಿಂದ ಕಲ್ಪತರು ಕನ್ನಡ ಸಾಹಿತ್ಯ ಪ್ರಶಸ್ತಿ ನೀಡುತ್ತಿದ್ದು, ಇಂದು ಹಾಸ್ಯ ಸಾಹಿತಿ ವೈ.ವಿ.ಗುಂಡುರಾವ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಸಂಘದ ಸಂಸ್ಥಾಪಕ ಕಾರ್ಯದರ್ಶಿ ಎನ್​.ಭಾನುಪ್ರಶಾಂತ್​ ಮಾತನಾಡಿದರು. ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲ ಸ್ಥಾನ ಗಳಿಸುವಲ್ಲಿ ಶ್ರಮಿಸಿದ ಬಿಇಒ ತಾರಾಮಣಿ, ಮತ್ತು ನಿವೃತ್ತ ಪ್ರಾಂಶುಪಾಲರಾದ ಕೆ.ಎನ್​. ರೇಣುಕಯ್ಯ, ಮತ್ತು ಚನ್ನೇಗೌಡ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಚ್​.ಸಿ. ನಾಗರಾಜು. ರಾಮನಾಥ್​, ವೈ.ವಿ.ಗುಂಡೂರಾವ್​, ಪಾಲ್​ ಸುದರ್ಶನ್​, ಉದಯಟಿವಿಯ ಶಿವರಾಜ್​, ತುರುವೇಕೆರೆ ಪ್ರಸಾದ್​, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸತ ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ಬಿಜೆಪಿ ಯುವ ಮುಖಂಡ ವಿಶ್ವದಿಪ್​, ಗ್ರೇಡ್​&-2 ತಹಸೀಲ್ದಾರ್​ ಎಸ್​.ಕೆ. ಜಗನ್ನಾಥ್​ ಇದ್ದರು.