ಬುಕ್ಕಾಪಟ್ಟಣ ಹೋಬಳಿ ಕರೆಮಾದೇನಹಳ್ಳಿ ವೈಶಿಷ್ಟ್ಯ 
ತುಮಕೂರು

ಮುಸ್ಲಿಮರೆ ಇಲ್ಲದ ಗ್ರಾಮದಲ್ಲಿ ಅದ್ದೂರಿ ಬಾಬಯ್ಯನ ಮೊಹರಂ

ಪ್ರಮುಖ ಮುಖ್ಯಾಂಶಗಳು

  • ಸಾಮರಸ್ಯದ ಸಂಕೇತವಾಗಿ ಹಬ್ಬ ಆಚರಣೆ
  • ಬುಕ್ಕಾಪಟ್ಟಣ ಹೋಬಳಿ ಕರೆಮಾದೇನಹಳ್ಳಿ ವೈಶಿಷ್ಟ್ಯ
  • ಹಿಂದೂಗಳೇ ಆಚರಿಸುವ ಬಾಬಯ್ಯನ ಮೊಹರಂ
ತುಮಕೂರು: ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮೊಹರಂ ಬಾಬಯ್ಯನ ಉರುಸ್ ನಡೆಸುವುದು ಸಾಮಾನ್ಯ ಆದರೆ, ಇಲ್ಲೊಂದು ಗ್ರಾಮದಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಸಹ ಗ್ರಾಮದ ಜನರು ಬಾಬಯ್ಯನ್ನ ಮೊಹರಂ ಆಚರಣೆ ಅದ್ದೂರಿಯಾಗಿ ಮಾಡುತ್ತಾರೆ.
ಒಂಬತ್ತು ದಿನಗಳ ಕಾಲ ಬಾಬಯನನ್ನು ಕೂರಿಸಿ ಪೂಜಿಸಿ ಕೊನೆಯ ದಿನ ಗ್ರಾಮದ ತುಂಬೆಲ್ಲ ಮೆರವಣಿಗೆ ಕೆಂಡ ಹಾಗೂ ಅನ್ನ ಸಂತರ್ಪಣೆ ಮೂಲಕ ಅದ್ದೂರಿಯಾಗಿ ಆಚರಿಸುತ್ತಾರೆ ಇಂತಹ ಒಂದು ಅಪರೂಪದ ಸನ್ನಿವೇಶ ಕಂಡುಬರುವುದು ತುಮಕೂರು ಜಿಲ್ಲೆ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕರೆ ಮಾದೇನಹಳ್ಳಿ ಗ್ರಾಮದಲ್ಲಿ.
ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ಇಲ್ಲದಿದ್ದರೂ ಸಹ ಇರುವ ಎಲ್ಲಾ ಹಿಂದೂ ಜನರು ನೂರಾರು ವರ್ಷಗಳಿಂದ ಬಾಬಯ್ಯನ ಉರುಸ್ ಹಾಗೂ ಮೊಹರಂ ಆಚರಣೆ ನಡೆಸಿಕೊಂಡು ಬಂದಿದ್ದಾರೆ ಮೊಹರಂ ಹಬ್ಬ ಬಂತೆಂದರೆ ಜನರಲ್ಲಿ ಏನೋ ಒಂದು ರೀತಿ ಸಂತಸ ಸಂಭ್ರಮ ಸಡಗರ ಮನೆಮಾಡುತ್ತದೆ ಗ್ರಾಮದ ಮಧ್ಯದಲ್ಲಿ ಬಾಬಯ್ಯನನ್ನು ಕೂರಿಸಿ ಪೂಜೆ ಮಾಡಿ ಧರ್ಮ ಸಹಿಷ್ಣಗಳಾಗಿ ನಾಡಿನ ಎಲ್ಲಾ ಜನರಿಗೆ ಮಾದರಿಯಾಗಿದ್ದಾರೆ.