- ಜಿಲ್ಲೆಯಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿ ವಿಳಂಬ
- ಮೂರು ವಿಭಾಗದಲ್ಲಿ 621 ಪ್ರಕರಣ ಇತ್ಯರ್ಥಕ್ಕೆ ಬಾಕಿ
- ಪರಿಶಿಷ್ಟ ಸಮುದಾಯಗಳಿಗೆ ಸಿಗದ ಕಾಯ್ದೆ ಬಲ
ತುಮಕೂರು: ಸರ್ಕಾರದಿಂದ ಮಂಜೂರಿಯಾದ ಉಳುಮೆ ಮಾಡುವ ಭೂಮಿಯನ್ನು ವಿವಿಧ ಕಾರಣಗಳಿಂದ ಕಳೆದುಕೊಂಡ ಕಂಗಾಲಾಗಿದ್ದ ಪರಿಶಿಷ್ಟ ಸಮುದಾಯಗಳಿಗೆ ವರದಾನವಾಗಿರುವ ಪಿಟಿಸಿಎಂ ಕಾಯ್ದೆಯಂತೆ ಜಿಲ್ಲೆಯಲ್ಲಿ ನ್ಯಾಯದ ಅನುಷ್ಟಾನ ನಿಧಾನವಾಗಿದೆ. ತಿಪಟೂರು, ಮಧುಗಿರಿ ಹಾಗೂ ತುಮಕೂರು ಉಪವಿಭಾಗದಲ್ಲಿ ಬರೋಬ್ಬರಿ 621 ಪ್ರಕರಣಗಳು ವಿಚಾರಣೆ ಹಂತದಲ್ಲಿಯೇ ಇದೆ.
ಆಯಾ ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಈಗಾಗಲೇ ಇತ್ಯರ್ಥವಾಗಿರುವ 59 ಪ್ರಕರಣಗಳ ಪೈಕಿ ಇನ್ನೂ 22 ಪ್ರಕರಣಗಳಲ್ಲಿ ಭೂಮಿಯನ್ನು ಮರಳು ಮೂಲ ವಾರಸುದಾರರಿಗೆ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಸಾಕಷ್ಟು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಕೆಯಾಗದಿದ್ದರೂ ಅಧಿಕಾರಿಗಳೇ ಭೂಮಿ ಬಿಡಿಸಿಕೊಡಲು ಮನಸ್ಸು ಮಾಡುತ್ತಿಲ್ಲ ಎಂಬ ದೂರಿದೆ.
ಕಾಯ್ದೆ 1979ರಿಂದ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ(ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಅಧಿನಿಯಮ&1978 ಜಾರಿಯಾದರೂ ಜಿಲ್ಲೆಯ ತುಮಕೂರು, ತಿಪಟೂರು ಹಾಗೂ ಮಧುಗಿರಿ ಉಪವಿಭಾಗದಲ್ಲಿ ಅರ್ಹರಿಗೆ ಭೂಮಿಯನ್ನು ಮರಳಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡಿಲ್ಲ.
ಪಿಟಿಸಿಎಲ್ ಕಾಯ್ದೆಯಂತೆ ಆಯಾ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದರೂ ಜಿಲ್ಲೆಯಲ್ಲಿ ಇನ್ನೂ 22 ಪ್ರಕರಣಗಳಲ್ಲಿ ವಾರಸುದಾರರಿಗೆ ಜಮೀನು ಬಿಡಿಸಿಕೊಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ತುಮಕೂರು ಉಪವಿಭಾಗದಲ್ಲಿ 7, ತಿಪಟೂರು 9 ಹಾಗೂ ಮಧುಗಿರಿ ಉಪವಿಭಾಗದಲ್ಲಿ 9 ಒಟ್ಟು 22 ಪರಿಶಿಷ್ಟ ಸಮುದಾಯಗಳು ಭೂಮಿಗಾಗಿ ಕಾಯುತ್ತಿವೆ.
ಪಿಟಿಸಿಎಲ್ ಪ್ರಕರಣಗಳಲ್ಲಿ ಸಹಾಯಕ ಆಯುಕ್ತರ ಆದೇಶಗಳನ್ನು ಅನುಸರಿಸಿ ಮಂಜೂರಿದಾರರಿಗೆ ಜಮೀನು ಮರಳಿಕೊಡಿಸಲು ಪಿಟಿಸಿಎಲ್ ಕಾಯ್ದೆ ಕಲಂ 5ರ ಅಡಿಯಲ್ಲಿ ಅವಕಾಶವಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಬಿಡಿಸಿಕೊಡಲು ಮೀನಾಮೇಷ ಎಣಿಸುತ್ತಿರುವುದು ಬಡ ದಲಿತ ಸಮುದಾಯಕ್ಕೆ ಭೂಮಿ ಭಾಗ್ಯ ಇಲ್ಲದಂತಾಗಿದೆ,
ಇತ್ಯರ್ಥವಾದವು ಹಾಗೂ ಭೂಮಿ ಬಿಡುಗಡೆ ಬಾಕಿ.
ಉಪವಿಭಾಗ ಇತ್ಯರ್ಥವಾದ ಪ್ರಕರಣ ಭೂಮಿ ಬಿಡುಗಡೆ ಬಾಕಿ
ಇತ್ಯರ್ಥವಾಗಬೇಕಾದ ಪಿಟಿಸಿಎಲ್ ಪ್ರಕರಣ:
ಉಪವಿಭಾಗ ವಿಲೇವಾರಿಗೆ ಬಾಕಿ ವಿಲೇವಾರಿಯಾದ ಪ್ರಕರಣ