ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರು 
ತುಮಕೂರು

ಕೆ.ಸೇವಾಲಾಲ್ ಪುರ ಗ್ರಾಮದಲ್ಲಿ 150 ಜನ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಪ್ರಮುಖ ಮುಖ್ಯಾಂಶಗಳು

  • ಭೀಮಿ ಸತ್ತಿ ಪೂಜಾ ಪ್ರಸಾದ ಸೇವಿಸಿದವರೆಲ್ಲಾ ಅಸ್ವಸ್ಥ
  • ಪಾವಗಡ ತಾಲೂಕು ಕೆ.ಸೇವಾಲಾಲ್ ಪುರ ಜನರ ಆತಂಕ
  • ತಾತ್ಕಾಲಿಕ ಕ್ಲಿನಿಕ್​ ತೆರೆದು ಚಿಕಿತ್ಸೆ
ತುಮಕೂರು: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಕೆ.ಸೇವಾಲಾಲ್ ಪುರ ಗ್ರಾಮದಲ್ಲಿ ವಾಂತಿ ಭೇದಿಯಿಂದಾಗಿ 150ಕ್ಕೂ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ನಡೆದಿದ್ದ ಗ್ರಾಮದ ಭೀಮಿ ಸತ್ತಿ ಪೂಜಾ ಕಾರ್ಯಕ್ರಮದ ವೇಳೆ ಸೇವಿಸಿದ ಆಹಾರದಲ್ಲಿ ವ್ಯತ್ಯಾಸವಾಗಿ ವಾಂತಿ ಭೇದಿಯಾಗಿದೆ. ಶುಕ್ರವಾರ ಕೆ.ಸೇವಾಲಾಲ್ ಪುರ ಹಾಗೂ ಉಪ್ಪಾರಹಳ್ಳಿ ಚಳ್ಳಕೆರೆ ಜಂಬಯ್ಯನ ಹಟ್ಟಿ ಸೇರಿದಂತೆ ಆಂದ್ರ ಸಂಬಂಧಿಗಳಿಗೂ ವಾಂತಿ ಬೇದಿ ಕಾಣಿಸಿಕೊಂಡಿದೆ.
ಇದ್ದಕ್ಕಿದ್ದಂತೆ ಗ್ರಾಮಸ್ಥರಲ್ಲಿ ಗುರುವಾರ ರಾತ್ರಿಯಿಂದ ಕಾಣಿಸಿಕೊಂಡ ವಾತಿ, ಬೇಧಿಯು ಶನಿವಾರ ಮಧ್ಯಾನ್ಹದ ವರೆಗೆ ಒಬ್ಬೊಬ್ಬರಂತೆ ಸರ್ಕಾರಿ ಆಸ್ಪತ್ರೆಯ ಡಾ.ಶಿವಕುಮಾರ್, ಡಾ.ಸುಧಾಕರ ರೆಡ್ಡಿ ಸೇರಿದಂತೆ ಡಾ.ಸುಧೀರ್ ಆಸ್ಪತ್ರೆಗಳಲ್ಲಿ ಸುಮಾರು 150ಕ್ಕೂ ಹೆಚ್ಚುಮಂದಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.
ವಿಜಯವಾಣಿಗೆ ಪ್ರತಿಕ್ರಿಯಿಸಿದ ಡಿಎಚ್​ಒ ಡಾ.ಚಂದ್ರಶೇಖರ್​ ಪ್ರತಿಕ್ರಿಯಿಸಿ, ಕೆ.ಸೆವಾಲಾಲ್ ಪುರ ಗ್ರಾಮದಲ್ಲಿ ಆಸ್ಪತ್ರೆಗೆ ದಾಖಲಾದ ಎಲ್ಲರ ಆರೋಗ್ಯ ಸ್ಥಿರವಾಗಿದೆ. ಆಹಾರದಲ್ಲಿ ವ್ಯತ್ಯಾಸವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸದ್ಯಕ್ಕೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.ಮನೆಮನೆ ಸರ್ವೆ ಕೂಡ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು