ಜಿಲ್ಲೆ

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧಾ ವಿಜೇತರು

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.

ಮಹಾತ್ಮಗಾಂಧೀಜಿ ವಿಚಾರ ಕುರಿತು ಮಕ್ಕಳು ಹಾಗೂ ಯುವಜನರಲ್ಲಿ ಜಾಗೃತಿ ಹೆಚ್ಚಿಸುವ ಸಲುವಾಗಿ ಕಳೆದ ಸೆಪ್ಟೆಂಬರ್​ 6ರಂದು ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ 3 ವಿಭಾಗಗಳಲ್ಲಿ ಆಯ್ದ ವಿಷಯ ಕುರಿತು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಅಕ್ಟೋಬರ್​ 2ರ ಗಾಂಧೀ ಜಯಂತಿಯಂದು ನಗದು ಬಹುಮಾನ ವಿತರಿಸಲಾಗುತ್ತಿದೆ.

ಪ್ರೌಢಶಾಲಾ ವಿಭಾಗ: ಮಧುಗಿರಿ ತಾಲೂಕು ಯಲ್ಕೂರಿನ ವಿಶ್ವಭಾರತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದಿವ್ಯ ಪ್ರಥಮ, ಗುಬ್ಬಿ ತಾಲೂಕು ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಟಿ.ಎಚ್​.ಆಕಾಶ್​ ದ್ವೀತಿಯ ಹಾಗೂ ಶಿರಾ ತಾಲೂಕು ಕುರುಬರರಾಮನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಎಂ.ಅನು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕುಣಿಗಲ್​ ತಾಲೂಕು ಮಹಾತ್ಮ ಗಾಂಧಿ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಎಲ್​.ಲೋಲಾಕ್ಷಿದೇವಿ , ತುಮಕೂರಿನ ಎಂಪ್ರೆಸ್​ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ದ್ವೀತಿಯ ಪಿಯು ವಿದ್ಯಾರ್ಥಿನಿ ಪಾಲಮ್ಮ ಹಾಗೂ ತುರುವೇಕೆರೆ ತಾಲೂಕು ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಪಾರ್ವತಿ ಫ.ಕರಡಿ ಅವರು ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.

ಪದವಿ, ಸ್ನಾತಕೋತ್ತರ ಪದವಿ ವಿಭಾಗ: ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ತೃತೀಯ ಬಿಎ ವಿದ್ಯಾರ್ಥಿನಿ ಎ.ಪಿ.ಭಾವನಾ ಮೊದಲನೇ, ಪ್ರಥಮ ಬಿಕಾಂ ವಿದ್ಯಾರ್ಥಿನಿ ಎನ್​.ಅರುಂಧತಿ, 2ನೇ ಹಾಗೂ ಇತಿಹಾಸ ವಿಭಾಗದ ದ್ವೀತಿಯ ಎಂಎ ವಿದ್ಯಾರ್ಥಿನಿ ಬಿ.ಎಚ್​.ಜ್ಯೋತಿ ಅವರು 3ನೇ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರಬಂಧಗಳನ್ನು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಿ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತಾಲಯಕ್ಕೆ ಕಳುಹಿಸಲಾಗಿದೆ.