ತುಮಕೂರು: ತುಮಕೂರು ತಾಲೂಕು ಯಲ್ಲಾಪುರ ಸರ್ಕಾರಿ ಪಿಯು ಕಾಲೇಜು ಇತಿಹಾಸ ಉಪನ್ಯಾಸಕ ಡಾ.ಜಿ.ವಿ.ಗೋಪಾಲ್ ಅವರಿಗೆ ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಕೊಡಮಾಡುವ ರಾಜ್ಯದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ರಾಮನಗರ ತಾಲೂಕು ಕೈಲಂಚ ಹೋಬಳಿ ಗೌಡಯ್ಯನದೊಡ್ಡಿಯ ರೈತ ವೆಂಕಟಪ್ಪ, ಲಕ್ಷö್ಮಮ್ಮ ದಂಪತಿ ಪತ್ರರಾದ ಡಾ.ಜಿ ವಿ ಗೋಪಾಲï ಪ್ರಸ್ತುತ ತುಮಕೂರು ತಾಲೂಕು ಯಲ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಗೋಪಾಲ್ ಪಿಯು ಮತ್ತು ಪದವಿಯನ್ನು ಚನ್ನಪಟ್ಟಣದಲ್ಲಿ ಹಾಗೂ ಬೆಂಗಳೂರು ವಿವಿ ಇತಿಹಾಸ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಎಂಎ ಮುಗಿಸಿ, ನಂತರ ಪಿಎಚ್‌ಡಿ, ಎಂ.ಫಿಲ್ ಕೂಡ ಪೂರ್ಣಗೊಳಿಸಿ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸ ಎನ್ನಿಸಿದ್ದಾರೆ.
ಗುಲ್ಬರ್ಗ ಕೇಂದ್ರೀಯ ವಿವಿ ಕುಲಪತಿಯಾಗಿದ್ದ ಪ್ರೊ.ಎಸ್.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಸ್ವಾತಂತ್ರö್ಯ ಚಳವಳಿಯಲ್ಲಿ ಮಂಡ್ಯ ಜಿ¯್ಲೆಯ ರೈತರ ಪಾತ್ರ ಎಂಬ ವಿಷಯದ ಮೇಲೆ ಎಂ.ಫಿಲ್ ಹಾಗೂ ಸ್ವಾತಂತ್ರö್ಯ ಚಳ ವಳಿಯಲ್ಲಿ ಮೈಸೂರಿನ ರೈತರ ಪಾತ್ರ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿ ಪೂರ್ಣಗೊಳಿಸಿದ್ದಾರೆ.
1997ರಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆಗೆ ಆರಂಭಿಸಿದ ಡಾ.ಜಿ.ವಿ.ಗೋಪಾಲ್2018ರ ವರೆಗೆ ಕುಣಿಗಲ್ ಸರ್ಕಾರಿ ಬಾಲಕಿಯ ಪಿಯು ಕಾಲೇಜು,2018ರಿಂದ 2022ರ ವರೆಗೆ ಚೇಳೂರು ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಯಲ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯ್ಕೆ ಶ್ರೇಣಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.