ಜಿಲ್ಲೆ

ಚರಿತ್ರೆ ಅಧ್ಯಯನಕ್ಕೆ ಕೌಶಲ, ಆಸಕ್ತಿ, ಶ್ರದ್ಧೆ ಮುಖ್ಯ; ಪ್ರೊ.ಡಿ.ವಿ.ಪರಮಶಿವಮೂರ್ತಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪ್ರಾಚೀನ ಶಾಸನಗಳ ಭಾಷೆ ಮತ್ತು ಲಿಪಿಗಳನ್ನು ತಿಳಿದರೆ ಇತಿಹಾಸದ ವೈಭವ ಮತ್ತು ಬದುಕು ಅರಿಯಬಹುದು ಎಂದು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ತುಮಕೂರು ವಿವಿ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತç ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಭಾರತೀಯ ಶಾಸನಶಾಸ್ತç ಮತ್ತು ಆಧುನಿಕ ತಂತ್ರಜ್ಞಾನಗಳು ಕುರಿತ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಚರಿತ್ರೆಯ ಅಂಶಗಳಾದ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುಬೇಕು. ಚರಿತ್ರೆಯಲ್ಲಿ ಶಾಸನ ಕ್ಷೇತ್ರ ಬಹಳ ಕುತೂಹಲ ಮೂಡಿಸುವ ಕ್ಷೇತ್ರ. ಈ ಕ್ಷೇತ್ರವನ್ನು ಅಧ್ಯಯನ ಮಾಡಬೇಕಾದರೆ ಕೌಶಲ, ಆಸಕ್ತಿ, ಶ್ರದ್ಧೆ ಬಹಳ ಮುಖ್ಯ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು, ಕಾರ್ಯಕ್ರಮದ ಸಂಯೋಜಕ ಪ್ರೊ.ಎಂ.ಕೊಟ್ರೇಶ್, ವಿಭಾಗದ ಮುಖ್ಯಸ್ಥೆ ಡಾ.ಪ್ರಿಯಾ ಠಾಕೂರ್, ಪ್ರಾಧ್ಯಾಪಕ ಪ್ರೊ.ಎಲ್.ಪಿ.ರಾಜು, ಪ್ರೊ.ಶ್ರೀನಿವಾಸ್ ಇದ್ದರು.