ಜಿಲ್ಲೆ

ವ್ಯಕ್ತಿ ಬದಲಾವಣಿಯಿಂದ ಮಾತ್ರ ದಲಿತರ ಸಬಲೀಕರಣ ಸಾಧ್ಯ: ಪ್ರೊ.ಎಂ.ಕೊಟ್ರೇಶ್

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ದಲಿತರ ಸಬಲೀಕರಣ ಆಧುನಿಕ ಭಾರತದಲ್ಲಿ ಮುಗಿದ ಅಧ್ಯಾಯವಾಗಿರದೆ ಇಂದಿಗೂ ಒಂದು ನಿರಂತರ ಹೋರಾಟವಾಗಿ ಮುಂದುವರೆದಿದೆ ಎಂದು ಹಂಪಿ ಕನ್ನಡ ವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಇತಿಹಾಸ ಮತ್ತು ಪುರಾತತ್ವ ವಿಭಾಗ ಗುರುವಾರ ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ದಲಿತಗುರು ದಿ.ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸದಲ್ಲಿ `ಡಾ.ಬಿ.ಆರ್.ಅಂಬೇಡ್ಕರ್: ದಲಿತರ ಸಬಲೀಕರಣ' ವಿಷಯ ಕುರಿತು ಮಾತನಾಡಿದರು.

ದಿ ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಎಂ.ಆರ್.ಪ್ರಸನ್ನಕುಮಾರ್ ಮಾತನಾಡಿ, ದಲಿತೋದ್ಧಾರದ ಆದರ್ಶದ ಪಾಲನೆ ಇಂದಿನ ಅವಶ್ಯಕತೆಯಾಗಿದೆ. ಡಾ.ಅಂಬೇಡ್ಕರ್ ಪ್ರತಿಪಾದಿಸಿದ ಅರಿವಿನ ಮೂಲಕ ಜ್ಞಾನ ಹೆಚ್ಚು ಪ್ರಸ್ತುತವಾಗಿದೆ, ತಲಕಾಡು ರಂಗೇಗೌಡರು ದಲಿತೋದ್ಧಾರಕ್ಕಾಗಿ ಮಾಡಿದ ಕೆಲಸ ಅನುಕರಣೀಯ ಎಂದರು.

ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್ ಮಾತನಾಡಿ, ಮನುಷ್ಯನ ಮನಸ್ಸು ಬದಲಾಗದೇ ದಲಿತರ ಸಬಲೀಕರ ಸಾಧ್ಯವಿಲ್ಲ ಶಿಕ್ಷಣದ ಮೂಲಕ ಮನುಷ್ಯನ ಮನಸ್ಸಿನ ಬದಲಾವಣೆ ಸಾಧ್ಯ, ವೈಯಕ್ತಿಕ ಪರಿವರ್ತನೆಯ ಮೂಲಕವೇ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದರು.

ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ್, ಪ್ರಾಧ್ಯಾಪಕ ಪ್ರೊ.ಎಲ್.ಪಿ.ರಾಜು, ಡಾ.ಪ್ರಿಯ ಠಾಕೂರ್, ಡಾ.ಚಿಕ್ಕಣ್ಣ ಇದ್ದರು.