ತುಮಕೂರು:ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ವಿಶ್ವಕರ್ಮ ಸಮುದಾಯದ ಒಬ್ಬ ನಾಮನಿರ್ದೇಶಿತ ಸದಸ್ಯರನ್ನು 2 ವರ್ಷಗಳ ಅವಧಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಾಮನಿರ್ದೇಶಿತ ಸದಸ್ಯರಾಗಬಯಸುವವರು ತುಮಕೂರು ಜಿಲ್ಲೆಯವರಾಗಿದ್ದು, ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರಬೇಕು. ಎಸ್ಎಸ್ಎಲ್ಸಿ ವರೆಗೂ ವಿದ್ಯಾಭ್ಯಾಸ ಮಾಡಿರಬೇಕು. ಸಂಬಂಧಿಸಿದ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗ, ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು.
ಆಯ್ಕೆಯಾಗುವ ವ್ಯಕ್ತಿಯು ನಿಗಮದಲ್ಲಿ ಅನುಫಿ್ಠಾನಗೊಳ್ಳುತ್ತಿರುವ ಪಂಚವೃತ್ತಿ ಯೋಜನೆಗಳ ಪರಂಪರಾಗತವಾಗಿ ಸ್ವಂತ ನಿರ್ವಹಿಸಿರುವ ಅನುಭವ ಹೊಂದಿರಬೇಕು ಹಾಗೂ ಯಾವುದೇ ರೀತಿಯ ಕ್ರಿಮಿನಲ್ ಮೊಕ್ಕದ್ದಮೆ ಎದುರಿಸುತ್ತಿರಬಾರದು. ದಂಡ, ಜುಲ್ಮಾನೆ, ಶಿಕ್ಷೆ ಅನುಭವಿಸಿರಬಾರದು.
ಅರ್ಹ ವಿಶ್ವಕರ್ಮ ಮತ್ತು ಅದರ ಉಪಜಾತಿಗಳಿಗೆ ಸೇರಿದವರು ನ.7ರ ಸಂಜೆ 4.30ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿ ಅಥವಾ ದೂ.0816- 2005008 ಸಂಪರ್ಕಿಸಿ.