ಜಿಲ್ಲೆ

ಸ್ಫರ್ಧೆಗೆ ನಾನು ಸಿದ್ಧ, ಟಿಕೆಟ್ ವಿಷಯ ಹೈಕಮಾಂಡ್‌ಗೆ ಬಿಟ್ಟದ್ದು; ಎಂ.ವೀರಪ್ಪಮೊಯ್ಲಿ

ತುಮಕೂರು: ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೋಯ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಶ್ರೀಸಿದ್ಧಲಿಂಗಸ್ವಾಮೀಜಿ ಆಶಿರ್ವಾದ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಮಠಕ್ಕೆ ಭೇಟಿ ನೀಡಿ ತುಂಬ ದಿನಗಳಾಗಿತ್ತು ಹಾಗಾಗಿ, ಭೇಟಿ ನೀಡಿ ಆಶಿರ್ವಾದ ಪಡೆದಿದ್ದೇನೆ ಎಂದರು.

2019ರಲ್ಲಿ ಸೋತಾಗಿನಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜನರ ಸಂಪರ್ಕದಲ್ಲಿದ್ದೇನೆ ಮುಂಬರುವ ಚುನಾವಣೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ, ಸ್ಫರ್ಧೆಗೆ ನಾನು ಸಿದ್ದ, ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ವಾತಾವರಣ ಕಾಂಗ್ರೆಸ್ ಪರವಾಗಿದೆ, ಕೆಂದ್ರ ಸರ್ಕಾರದ ಹುಳುಕು ಜನರಿಗೆ ಗೊತ್ತಾಗ್ತಿದೆ. ಬಿಜೆಪಿ ಸೋಲುತ್ತೆ. ರಾಜ್ಯದಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನದಲ್ಲಿ ಗೆಲುವು ಪಡೆಯಲಿದೆ ಎಂದರು.