ವಿಜಯಪುರದ ಚೇತನಾ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಿಜಿಜೆ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದರು. ರಾಜಶ್ರೀ ಜುಗತಿ ಮತ್ತಿತರರಿದ್ದಾರೆ. 
ಜಿಲ್ಲೆ

ವಿವಿಧ ಪ್ರವೇಶ ಪರೀಕ್ಷೆ

ತುಮಕೂರು: ನಗರದ 4 ಕೇಂದ್ರಗಳಲ್ಲಿ ಮೇ.31ರಂದು ಡಿಸಿಇಟಿ, ಪಿಜಿ ಸಿಇಟಿ, ಸಮಾಜ ಕಲ್ಯಾಣ ಇಲಾಖೆ ಕೆಎಎಸ್​ ಉಚಿತ ತರಬೇತಿ ಪರೀಕ್ಷೆ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಒಟ್ಟು 2160 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇಂಜಿನಿಯರಿಂಗ್​ ಕೋರ್ಸ್​ಗಳಿಗೆ ಲ್ಯಾಟರಲ್​ ಪ್ರವೇಶಕ್ಕಾಗಿ ನಗರದ ಬಿ.ಹೆಚ್​. ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಶೋಕರಸ್ತೆಯಲ್ಲಿರುವ ಎಂಪ್ರೆಸ್​ ಪದವಿ ಪೂರ್ವ ಕಾಲೇಜಿನಲ್ಲಿ ಡಿಸಿಇಟಿ ಪರೀಕ್ಷೆ ಇಂದು ಮಧ್ಯಾಹ್ನ 2 ರಿಂದ 5ರ ವರೆಗೆ ನಡೆಯಲಿದ್ದು, 1462 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಂಇ, ಎಂಟೆಕ್​ ಕೋರ್ಸ್​ಗಳ ಪ್ರವೇಶಕ್ಕಾಗಿ ನಗರದ ಶ್ರೀಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ಪಿಜಿಸಿಇಟಿ ಪರೀಕ್ಷೆ ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ನಡೆಯಲಿದ್ದು, 209 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ನಗರದ ಬಿ.ಹೆಚ್​. ರಸ್ತೆಯ ಶ್ರೀ ಸಿದ್ಧಗಂಗಾ ಮಹಿಳೆಯರ ಪಿಯು ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕೆಎಎಸ್​ ಉಚಿತ ತರಬೇತಿ ಪರೀಕ್ಷೆಯು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ನಡೆಯಲಿದ್ದು, 489 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.