ಜಿಲ್ಲೆ

ಟ್ರೇಡ್​ ಲೈಸೆನ್ಸ್​ಗೆ "ವ್ಯಾಪಾರ' ತಂತ್ರಾಂಶ ಬಳಕೆ

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರಿಗೆ ಟ್ರೇಡ್​ ಲೈಸೆನ್ಸ್​ ಹಾಗೂ ನವೀಕರಣಕ್ಕಾಗಿ ಏ.1 ರಿಂದ ಹೊಸದಾಗಿ "ವ್ಯಾಪಾರ' ಎಂಬ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ.

ಈ ಹಿಂದೆ ಟ್ರೇಡ್​ ಲೈಸೆನ್ಸ್​ ನೀಡಲು ಹಾಗೂ ನವೀಕರಣ ಮಾಡಲು ಬಳಸಲಾಗುತ್ತಿದ್ದ ಹಳೆಯ ಓಯಸಿಸ್​ ತಂತ್ರಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಈಗಾಗಲೇ "ವ್ಯಾಪಾರ' ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದೆ.

ಟ್ರೇಡ್​ ಲೈಸೆನ್ಸ್​ ಪಡೆಯಲು ಹಾಗೂ ನವೀಕರಣ ಮಾಡ ಬಯಸುವವರು http://www.mrc.gov.in/ ವೆಬ್​ಸೈಟ್​ಗೆ ಭೇಟಿ ನೀಡಿ "ಸಿಟಿಜನ್​ ಆನ್​ಲೈನ್​ ಸರ್ವೀಸ್​' ವಿಭಾಗವನ್ನು ಕ್ಲಿಕ್​ ಮಾಡಿದರೆ ವಿವಿಧ ಸೇವೆಗಳು ತೆರೆದುಕೊಳ್ಳಲಿದೆ. ಅದರಲ್ಲಿ "ಅಪ್ಲೆೃ ಫಾರ್​ ಟ್ರೇಡ್​ ಲೈಸನ್ಸ್​' ವಿಭಾಗವನ್ನು ಕ್ಲಿಕ್​ ಮಾಡಿ ಆನ್​ಲೈನ್​ ಮೂಲಕ ಅರ್ಜಿ ತುಂಬಿ ಟ್ರೇಡ್​ ಲೈಸನ್ಸ್​ ಪಡೆದುಕೊಳ್ಳಬಹುದು.

ಈ ತಂತ್ರಾಂಶದ ಮೂಲಕವೇ ಟ್ರೇಡ್​ ಲೈಸೆನ್ಸ್​ ಶುಲ್ಕವನ್ನು ಸಹ ಪಾವತಿ ಮಾಡಬಹುದು. ವರ್ತಕರು ಸಲ್ಲಿಸಿದ ಅರ್ಜಿಯು ಪ್ರಸ್ತುತ ಯಾವ ಹಂತದಲ್ಲಿ ಇದೆ ಎಂಬುದನ್ನು ಆನ್​ಲೈನ್​ನಲ್ಲಿ ಪರಿಶೀಲಿಸಬಹುದು. ಪರವಾನಗಿ ಆನ್​ಲೈನ್​ನಲ್ಲಿಯೇ ಡೌನ್​ ಲೋಡ್​ ಮಾಡಿಕೊಳ್ಳಬಹುದು. ಈ ಹಿಂದೆ ಹಲವು ಹಂತದ ಪರಿಶೀಲನೆ ನಡೆಯುತಿತ್ತು. ಆದರೆ ಹೊಸ ತಂತ್ರಾಂಶದಲ್ಲಿ ಎರಡು ಹಂತದ ಪರಿಶೀಲನೆ ಮಾತ್ರ ನಡೆಯುತ್ತದೆ.