ತುಮಕೂರು: ಕ್ಯಾತಸಂದ್ರ ಬ್ರಿಡ್ಜ್ ಕೆಳಗೆ ಅಸ್ವಸ್ಥನಾಗಿದ್ದ ಸುಮಾರು 45 ವರ್ಷದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾ.9ರಂದು ಮೃತಪಟ್ಟಿರುತ್ತಾನೆ.
ಈತನು ತನ್ನ ಹೆಸರು ಶ್ರೀನಿವಾಸ್ ಶಿರಾ ಗೇಟ್, ತುಮಕೂರು ಎಂದು ತಿಳಿಸಿದ್ದು, ಮೃತನ ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 170 ಸೆಂ.ಮೀ. ಎತ್ತರ, ಕೋಲು ಮುಖ, ಕೃಶಕಾಯ ಶರೀರ, ಕಪ್ಪು ಮೈಬಣ್ಣ ಹೊಂದಿದ್ದು, ಈತನ ಮೈಮೇಲೆ ಹಳದಿ ಬಣ್ಣದ ಟೀ-ಷರ್ಟ್, ಸಿಮೆಂಟ್ ಬಣ್ಣದ ಜರ್ಕಿನ್ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816-2281124, 2281120, 2278000 ಸಂಪರ್ಕಿಸಿ.