ಜಿಲ್ಲೆ

ಅಪರಿಚಿತ ಶವ ಪತ್ತೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುರುವೇಕೆರೆ ತಾಲೂಕು ಮಲ್ಲಾಘಟ್ಟ ಕೆರೆ ಬಳಿಯಿರುವ ಗಂಗಾಧರೇಶ್ವರ ದೇವಸ್ಥಾನದ ಬಳಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಇತ್ತೀಚೆಗೆ ಪತ್ತೆಯಾಗಿದ್ದು, ವಾರಸುದಾರರು ಪತ್ತೆಯಾಗಿಲ್ಲ.

ಮೃತ ವ್ಯಕ್ತಿ ಸುಮಾರು 3- ವರ್ಷಗಳ ಹಿಂದೆ ತುರುವೇಕೆರೆಗೆ ಬಂದು ಸೇರಿಕೊಂಡಿದ್ದು, ಅಕ್ಕಪಕ್ಕದ ಹಳ್ಳಿಯಲ್ಲಿ ಹಾಗೂ ತುರುವೇಕೆರೆ ಟೌನ್​ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಈತನು ತನ್ನ ಹೆಸರನ್ನು ಗುಬ್ಬಿ ಶ್ರೀನಿವಾಸ ಎಂದು ಹೇಳಿಕೊಂಡಿದ್ದು, ಸಂಬಂಧಿಕರ ಬಗ್ಗೆ ಆಗಲಿ ಹಾಗೂ ಈತನ ನಿಜವಾದ ವಿಳಾಸವಾಗಲಿ ತಿಳಿದಿಲ್ಲ.

ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್​ ಠಾಣೆ ಸಂಪರ್ಕಿಸಿ.