ಜಿಲ್ಲೆ

ತುರ್ತು ಚಿಕಿತ್ಸೆಗೆ ತುಮಕೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಸರ್ಕಾರಿ ಆಸ್ಪತ್ರೆ ಆರಂಭ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಜಿಲ್ಲಾಸ್ಪತ್ರೆ ಆವರಣದಲ್ಲಿ 56ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ `ಟ್ರಾಮಾ ಕೇರ್ ಸೆಂಟರ್'ಗೆ ಚಾಲನೆ ನೀಡಲಾಗಿದೆ.

ಬುಧವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ `ಟ್ರಾಮಾ ಕೇರ್ ಸೆಂಟರ್'ಗೆ ಚಾಲನೆ ನೀಡಿ ಮತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಅಪಘಾತ ಪ್ರಕರಣ ಹೆಚ್ಚಾಗುತ್ತಿರುವ ಆತಂಕಕಾರಿ ಎನ್ನಿಸಿದೆ ಎಂದರು.

ಅಪಘಾತ ಪ್ರಕರಣಗಳು ಸಂಭವಿಸಿದಲ್ಲಿ, ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿ., ವತಿಯಿಂದ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ನಿರ್ಮಾಣವಾಗಿದೆ ಎಂದರು.

ರಸ್ತೆ ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ 70ಕಿಮೀ ದೂರದ ಬೆಂಗಳೂರಿಗೆ ಕರೆದೊಯ್ಯುವ ಸ್ಥಿತಿಯಿದೆ. ಖಾಸಗಿ ಚಿಕಿತ್ಸೆಗಳಲ್ಲಿ ಬೇಕಾಗುವ ದುಭಾರಿ ವೆಚ್ಚ ಭರಿಸಲಾಗದೆ ಎಷ್ಟೊ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸ್ಟಾಪ್‌ನರ್ಸ್ಗಳ ವೇತನ ಹೆಚ್ಚಳಕ್ಕೆ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಒಪ್ಪಿಗೆ ನೀಡಿದ್ದು ಸಮಸ್ಯೆ ಭಗೆಹರಿದಿದೆ ಎಂದರು.

ಅಪಘಾತ ತುರ್ತು ಚಿಕಿತ್ಸಾ ಕೇಂದ್ರ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು ಪ್ರತ್ಯೇಕವಾಗಿ ಎರಡು ಪ್ರಧಾನ ಶಸ್ತçಚಿಕಿತ್ಸಾಗಾರಗಳು, ಎರಡು ಕಿರು ಶಸ್ತçಚಿಕಿತ್ಸಾಗಾರಗಳು ಮತ್ತು ಮೆಡಿಕಲ್ ಐಸಿಯು ಹಾಗೂ ಸರ್ಜಿಕಲ್ ಐಸಿಯು ಒಳಗೊಂಡಿದೆ ಎಂದರು.

ರೋಡ್ ಟ್ರಾಫಿಕ್ ಆಕ್ಸಿಡೆಂಟ್ ಪ್ರಕರಣ, ವಿಷ ಸೇವನೆ ಪ್ರಕರಣಗಳು, ಎಂಎಲ್‌ಸಿ ಪ್ರಕರಣಗಳು, ಸುಟ್ಟಗಾಯದ ಪ್ರಕರಣಗಳು ಮತ್ತು ಸೆಲ್ಫ್ ಫಾಲ್, ಎಲೆಕ್ಟಿçಕ್ ಶಾಕ್ ಇಂತಹ ಪ್ರಕರಣಗಳಿಗೆ ಪ್ರತ್ಯೇಕವಾಗಿ ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದ್ದು ವಿಳಂಬವಿಲ್ಲದೆ ತುರ್ತು ಚಿಕಿತ್ಸೆ ಲಭ್ಯವಿದೆ.

ತುರ್ತು ಚಿಕಿತ್ಸೆಗೆ ನುರಿತ ತಜ್ಞರು:

ಟ್ರಾಮಾಕೇರ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುವ 1 ನ್ಯೂರೊ ಸರ್ಜನ್, 2 ರೇಡಿಯೋಲಿಜಿಸ್ಟ್, 3 ಅರವಳಿಕೆ ತಜ್ಞರು, 3 ಕೀಲು ಮತ್ತು ಮೂಳೆ ಶಸ್ತçಚಿಕಿತ್ಸಾ ತಜ್ಞರು, 2 ಜನರಲ್ ಸರ್ಜನ್, 6 ಜನ ಅಪಘಾತ ವೈದ್ಯಕೀಯ ಅಧಿಕಾರಿಗಳು, 30 ಜನ ಸ್ಟಾಪ್ ನರ್ಸ್ಗಳು, 5 ಓಟಿ ಟೆಕ್ನಿಷೀಯನ್, 4 ರೇಡಿಯೋಗ್ರಾಫರ್, 2 ಲ್ಯಾಬ್ ಟೆಕ್ನಿಷೀಯನ್, 15 ಜನ ಮಲ್ಟಿ ಟಾಸ್ಕ್ ವರ್ಕರ್‌ಗಳು ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಶೀಘ್ರದಲ್ಲಿ ಆರಂಭವಾಗಲಿದೆ. ರಾಜ್ಯದ 1016 ಪೊಲೀಸ್ ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿನ ಕಮಾಂಡ್ ಸೆಂಟರ್‌ನಲ್ಲಿ ನೋಡಬಹುದು. ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕಮಾಂಡ್ ಸೆಂಟರ್‌ಗಳಿವೆ.
ಡಾ.ಜಿ.ಪರಮೇಶ್ವರ
ಗೃಹ ಸಚಿವ