ಜಿಲ್ಲೆ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಬಿಜೆಪಿ ಕಲ್ಪನೆಯಷ್ಟೇ: ಡಾ.ಜಿ.ಪರಮೇಶ್ವರ

ತುಮಕೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಸರ್ಕಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ, ವಿರೋಧ ಪಕ್ಷದವರಷ್ಟೇ ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರಿಡಲು ತೀರ್ಮಾನಿಸಲಾಗಿದ್ದು ಅಧಿವೇಶನದಲ್ಲಿ ಒಪ್ಪಿಗೆ ಪಡೆದು ಯಾವ ಹೆಸರು ಎಂದು ನಿರ್ಧರಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ವರದಿ ಮಂಡನೆಯಾಗುವ ಮುಂಚೆಯೇ ಜಾತಿಗಣತಿಗೂ ಕೆಲವರು ವಿರೋಧ ಮಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ವರದಿಯಲ್ಲಿ ಏನಿದೆ ಎಂಬುದೇ ಗೊತ್ತಿಲ್ಲವಲ್ಲ. ಯಾವ ಜಾತಿ ಎಷ್ಟಿದೆ, ಯಾವ ಜಾತಿ ಕಡಿಮೆ ಇದ್ದಾರೆ ಎಂಬ ಬಗ್ಗೆ ಯಾರೂ ಹೇಳಿಲ್ಲ ಎಂದರು.

170 ಕೋಟಿ ರೂ. ಖರ್ಚು ಮಾಡಿ ಸರ್ಕಾರ ಒಂದು ಸಮೀಕ್ಷೆ ಮಾಡಿಸಿದೆ. ಈ ಸಮೀಕ್ಷೆ ಹೊರಗಡೆ ಬಂದ ನಂತರವಷ್ಟೇ ಚರ್ಚೆ ನಡೆಯಬೇಕು. ಸಮೀಕ್ಷೆ ಬಂದಾಗ ಸರ್ಕಾರ ಯಾರು ಹಿಂದುಳಿದಿz್ದÁರೆ ಅವರಿಗೆ ಡೇಟಾ ಹಾಗೂ ಮಾಹಿತಿಗಳ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಬಹುದು ಎಂದರು.