ತುಮಕೂರು: ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಮಾಕನಹಳ್ಳಿ ರೈತ ಕುಟುಂಬ ಶಂಕರಪ್ಪ ಹಾಗೂ ಭಾಗ್ಯಮ್ಮ ದಂಪತಿ ಪುತ್ರ ಶರತ್ ಹುಟ್ಟಿನಿಂದಲೂ ಶೇ.95ರಷ್ಟು ದೃಷ್ಟಿ ದೋಷ ಹೊಂದಿದ್ದು ಕ್ರೀಡಾಕೂಟದಲ್ಲಿ ಸಹಾಯಕರನ್ನು ಪಡೆಯದೇ ಪದಕ ಗೆದ್ದಿರುವುದು ವಿಶೇಷ ಎನ್ನಿಸಿದೆ. ಈ ಹಿಂದೆಯೂ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ 1500 ಮೀಟವನ್ನು 4 ನಿಮಿಷ ಹಾಗೂ 13 ಸೆಕೆಂಡುಗಳಲ್ಲಿ ಓಡಿ ಗುರಿ ಬೆಳ್ಳಿಯ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕಲ್ಪತರು ಸೀಮೆಯ ಯುವಕ ಎನ್ನಿಸಿದ್ದಾರೆ.
ಆಶಾಕಿರಣ ಬ್ಲೈಂಡ್ ಸ್ಕೂಲ್‌ನಲ್ಲಿ 1-10ರ ತನಕ ಓದಿದ್ದ ಶರತ್ ನಂತರ ತಿಪಟೂರಿನ ಉದಯ ಭಾರತಿ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದ್ದಾರೆ.ಕೆಆರ್‌ಪುರಂ ಪದವಿ ಕಾಲೇಜಿನಲ್ಲಿ ಬಿಎ ಕೂಡ ಮುಗಿಸಿದ್ದಾರೆ.
ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಶರತ್, ಮುಂಬರುವ ಪ್ಯಾರಿಸ್ ಪ್ಯಾರಾಲಂಪಿಕ್ಸ್ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.