ತಿಪಟೂರು: ನಗರದ ಸಾರ್ವಜನಿಕ ಆಸ್ಪತ್ರೆ ದಂತ ವೈದ್ಯ ಡಾ.ಜಯಪ್ರಕಾಶ್ ಕರ್ತವ್ಯದ ಸಮಯದಲ್ಲಿಯೇ ಕಚೇರಿಯಲ್ಲಿ ಟೇಬಲ್ ಮೇಲೆ ಕಾಲು ಹಾಕಿಕೊಂಡು ನಿದ್ದೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಮವಾರ ಮಧ್ಯಾಹ್ನ ಕರ್ತವ್ಯದ ಅವಧಿಯಲ್ಲಿಯೇ ವೈದ್ಯ ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿದ್ದರು, ಜನರಿದ್ದರೂ ಟೇಬಲ್ ಮೇಲೆ ಕಾಲು ಹಾಕಿಕೊಂಡು ಮಲಗಿದ್ದಾರು ಎಂದು ಸ್ಥಳದಲ್ಲಿದ್ದ ರೋಗಿಗಳು ದೂರಿದ್ದಾರೆ.
ಕುಡಿದ ಅಮಲಿನಲ್ಲಿ ಆಸ್ಪತ್ರೆಗೆ ಬಂದಿದ್ದ ಎನ್ನಲಾಗಿರುವ ವೈದ್ಯ ಅಮಲಿನಲ್ಲಿ ಕುರ್ಚಿಯ ಮೇಲೆ ಅಸಭ್ಯವಾಗಿ ಮಲಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.