ಜಿಲ್ಲೆ

ಬ್ರಾಹ್ಮಣ ಒಳಪಂಗಡಗಳು ಒಗ್ಗಟ್ಟಾಗಲಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್​ ಹಾರನಹಳ್ಳಿ ಆಶಯ

Tumakuru

ತಿಪಟೂರು: ಬ್ರಾಹ್ಮಣ್ಯವನ್ನೇ ತೊಲಗಿಸುವ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮಾಜದ 28 ಒಳಪಂಗಡಗಳು ಜಾಗೃತವಾಗಿ ಸನಾತನ ಹಿಂದು ಧರ್ಮವನ್ನು ರಸಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್​ ಹಾರನಹಳ್ಳಿ ಹೇಳಿದರು.

ನಗರದ ಸೀತಾರಾಮಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲೂಕು ಸ್ಮಾರ್ಥ ಹೊಯ್ಸಳ ಕರ್ನಾಟಕ ಬ್ರಾಹ್ಮಣರ ಸಂ, ಹೊಯ್ಸಳ ಮಹಿಳಾ ಮಾತೃ ಮಂಡಳಿ ವತಿಯಿಂದ ಆಯೋಜಿಸಿದ್ದ 6ನೇ ವಾರ್ಷಿಕೋತ್ಸವ ಹಾಗೂ ಹೊಯ್ಸಳ ಹಬ್ಬ ಸಮಾರಂಭದಲ್ಲಿ ಮಾತನಾಡಿದರು.

ಬದಲಾದ ಕಾಲಟ್ಟದಲ್ಲಿ ಬ್ರಾಹ್ಮಣತ್ವ ಉಳಿಸಿಕೊಳ್ಳುವುದು ಕಷ್ಟವಾಗಿರುವ ಈ ದಿನಗಳಲ್ಲಿ ರಾಜ್ಯದಲ್ಲಿರುವ ಸ್ಮಾರ್ಥ, ಹೊಯ್ಸಳ, ಬಡಗನಾಡು ಸೇರಿ 28 ಒಳಪಂಗಡಗಳನ್ನು ಸೇರಿಸಿ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವ ಮೂಲಕ ಸಮುದಾಯದ ಉಳಿವಿಗಾಗಿ ಶ್ರಮಿಸುವ ಕಾಲ ಬಂದಿದೆ. ಇಲ್ಲವಾದಲ್ಲಿ ತಮಿಳುನಾಡಿನಲ್ಲಿ ಆದಂತಹ ಟನೆಗೆ ಇಲ್ಲೂ ಅವಕಾಶ ನೀಡಿದಂತಾಗುತ್ತದೆ ಎಂದರು.

ಉತ್ತರ ಕರ್ನಾಟಕ, ಶಿರಸಿ ಭಾಗದಲ್ಲಿ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಮುದಾಯದ ಹೆಣ್ಣು ಮಕ್ಕಳಿಗೆ ಗಂಡುಗಳು ಸಿಗುತ್ತಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಕೌಟುಂಬಿಕ ಸಮಸ್ಯೆಗಳಿಗೆೆ ವಕೀಲರ ಮೊರೆ ಹೋಗುವುದೊಂದೇ ಪರಿಹಾರವಲ್ಲ. ಇದರ ಪರಿಹಾರಕ್ಕಾಗಿ ಸಂದ ವತಿಯಿಂದ ಉಚಿತ ಕಾನೂನು ನೆರವು, ಕೌನ್ಸೆಲಿಂಗ್​ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೆಲಗೂರು ಮಾರುತಿ ಪೀಠದ ಶ್ರೀ ವಿಜಯ ಮಾರುತಿ ಶರ್ಮಾ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಾಹ್ಮಣ ಜನ್ಮ ಲಭಿಸುವುದೇ ಕಷ್ಟ ಸಾಧ್ಯ. ಅಪರೂಪದ ಜನ್ಮವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಸಂಟಿತ ರಾಗಿರುವ ಪರಿಣಾಮ ಉದ್ಯೋಗ, ಸವಲತ್ತುಗಳು ಕೈ ತಪ್ಪಿವೆ. ಸಂಟನೆಗಳ ಮೂಲಕ ಮತ್ತೆ ಒಗ್ಗೂಡುವ ಪ್ರಯತ್ನ ಆಗಬೇಕಿದೆ. ಪುರಾತನ ಸಂಪ್ರದಾಯ, ವೇದಗಳ ರಕ್ಷಣೆಗೆ ಒಗ್ಗೂಡುವುದು ಅನಿವಾರ್ಯ ಎಂದು ತಿಳಿಸಿದರು.

ತಾಲೂಕು ಸ್ಮಾರ್ಥ ಹೊಯ್ಸಳ ಕರ್ನಾಟಕ ಬ್ರಾಹ್ಮಣರ ಸಂದ ಅಧ್ಯಕ್ಷ ಎನ್​.ಎಸ್​.ಕೃಷ್ಣಸ್ವಾಮಿ, ತಾಲೂಕು ಸಂದ ಉಪಾಧ್ಯಕ್ಷ ಸಿ.ವಿ.ಅಶ್ವತ್ಥನಾರಾಯಣ್​, ತಾಲೂಕು ಹೊಯ್ಸಳ ಮಹಿಳಾ ಮಾತೃ ಮಂಡಳಿ ಅಧ್ಯೆ ರಾಜೇಶ್ವರಿ ಕೃಷ್ಣಮೂರ್ತಿ, ವಕೀಲ ಉದಯ್​ ಕುಮರ್​, ಹೊನ್ನವಳ್ಳಿ ಎಚ್​.ಆರ್​.ರಾಮಣ್ಣ, ಕಾರ್ಯದರ್ಶಿ ಹರೀಶ್​ ಇದ್ದರು.


ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶೇ.10 ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ತಿಳಿಸಲಾಗಿದ್ದರೂ, ರಾಜ್ಯ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ. ಬಡ ವಿದ್ಯಾರ್ಥಿಗಳ ನೆರವಿಗಾಗಿ ಸಿ.ಎಸ್​.ಆರ್​. ನಿಧಿಯಲ್ಲಿ 2&3 ಕೋಟಿ ರೂಪಾಯಿ ವೆಚ್ಚದಲ್ಲಿ ಎನ್​ಜಿಒ ರೀತಿ ಬೃಹತ್​ ಯೋಜನೆ ರೂಪಿಸಲಾಗಿದೆ. ಇನ್ನು ಮುಂದೆ ಸ್ಮಾರ್ಥ ಹೊಯ್ಸಳ ಬ್ರಾಹ್ಮಣ ಎಂಬ ಪದ ಬಳಕೆ ಬೇಡ, ಎಲ್ಲರೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರಾಗಿ ಗುರುತಿಸಿಕೊಳ್ಳಿ.

ಅಶೋಕ್​ ಹಾರನಹಳ್ಳಿ ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ