ಜಿಲ್ಲೆ

ಬೆಳಗುಂಬ ಶಾಲೆ ಆವರಣದಲ್ಲಿ ಮೂರು ವರ್ಷದ ಚಿರತೆ ಸೆರೆ

ತುಮಕೂರು: ನಗರದ ಹೊರವಲಯದ ರೆಡ್​ಕ್ರಾಸ್​ ವಾಕ್​ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಬಳಿ ಚಿರತೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮೂರು ವರ್ಷ ಪ್ರಾಯದ ಚಿರತೆ ಮಂಗಳವಾರ ರಾತ್ರಿ ಬಿದ್ದಿದೆ.

ತುಮಕೂರು ತಾಲೂಕಿನ ಬೆಳಗುಂಬ ಬಳಿಯಿರುವ ವಾಕ್​ ಶ್ರವಣ ದೋಷವುಳಲ್ಲ ವಸತಿ ಶಾಲೆಯ ಬಳಿ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ಚಿರತೆ ನೀಡಿದ್ದ ಮಕ್ಕಳು, ಶಿಕ್ಷಕರು ಭಯಗೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನು ಇಟ್ಟಿದ್ದರು. ಶಾಲೆಯ ಸುತ್ತಮುತ್ತಲೂ ಇನ್ನೂ ಒಂದೆರಡು ಚಿರತೆಗಳಿದ್ದು ಸೆರೆಹಿಡಿದು ಕಾಡಿಗಟ್ಟಬೇಕಿದೆ.