ಜಿಲ್ಲೆ

ಜಿಲ್ಲಾಧಿಕಾರಿ ಕಚೇರಿ ಲಿಫ್ಟ್​ನಲ್ಲಿ ಸಿಲುಕಿದ ಮೂವರು ಸಿಬ್ಬಂದಿ

ತುಮಕೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯುತ್​ ಸಮಸ್ಯೆಯುಂಟಾಗಿ ಡಿಯುಡಿಸಿ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು ಮೂರು ಜನರು ಲಿಫ್ಟ್​ ನಲ್ಲಿ

ಸಿಲುಕಿ ಪರದಾಡಿರುವ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ 30.30ರಲ್ಲಿ ವಿದ್ಯುತ್​ ಕಟ್​ ಮಾಡಲಾಗಿದ್ದು ನಾಲ್ಕು ಗಂಟೆಯಾದರೂ ವಿದ್ಯುತ್​ ಬರದ ಹಿನ್ನೆಲೆಯಲ್ಲಿ ಲಿಫ್ಟ್​ನಲ್ಲಿ ಸಿಲುಕಿ ಪರದಾಡುವಂತಾಗಿತ್ತು.

ಬೆಸ್ಕಾಂ ಸಿಬ್ಬಂದಿ ಕೂಡ ಊಟಕ್ಕೆ ತೆರಳಿದ್ದರಿಂದ ಸಕಾಲದಲ್ಲಿ ವಿದ್ಯುತ್​ ಸಂಪರ್ಕ ಪಡೆಯಲು ಸಾಧ್ಯವಾಗಲಿಲ್ಲ, ಜಿಲ್ಲಾಧಿಕಾರಿ ಕಚೇರಿ ಲಿಫ್ಟ್​ನಲ್ಲಿ ಸಿಲುಕಿ ಪರದಾಡುವುದು ಸಾಮಾನ್ಯ ಎನ್ನಿಸಿದ್ದು ಅದರಲ್ಲಿ ಸಿಲುಕಿದ್ದ ಸಿಬ್ಬಂದಿ ಮೊಬೈಲ್​ನಲ್ಲಿ ಗೇಮ್​ ಆಡಿಕೊಂಡು ಕಾಲ ಕಳೆದರು. ಲಿಫ್ಟ್​ನಲ್ಲಿ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದರೂ ಸಾರ್ವಜನಿಕರಿಗೆ ವಿಷಯ ತಿಳಿಯದಂತೆ ಜಿಲ್ಲಾಧಿಕಾರಿ ಸಿಬ್ಬಂದಿ ಸರ್ಕಸ್​ ನಡೆಸಿದ್ದರು.