ಹುಳಿಯಾರು: ಪೊಲೀಸರೆಂದು ಹೇಳಿಕೊಂಡು ಬಂದ ನಾಲ್ವರು ಅಪರಿಚಿತರು ವ್ಯಕ್ತಿಯೊಬ್ಬನನ್ನು ಅಪಹರಿಸಿರುವ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಚಿತ್ರದುರ್ಗದಲ್ಲಿ ತರಕಾರಿ ವ್ಯಾಪಾರಿ ಮಾಡಿಕೊಂಡಿರುವ ಸಂತೋಷ್ ಅಪಹರಣಕ್ಕೀಡಾದ ವ್ಯಕ್ತಿ. ಪತ್ನಿಯ ಊರಾದ ಬುಕ್ಕಾಪಟ್ಟಣಕ್ಕೆ ಬಂದಿದ್ದ ಸಂತೋಷ್‌ನನ್ನು ಏಕಾಏಕಿ ಕರೆದೊಯ್ಯಲಾಗಿದ್ದು ಈ ಬಗ್ಗೆ ಶಿರಾ ಹಾಗೂ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೂ ಮಾಹಿತಿ ಸಿಗದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಅಪಹರಣದ ದೂರು ಕೊಟ್ಟರೂ ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.