ಜಿಲ್ಲೆ

ಲಿಂಕ್ ಕೆನಾಲ್‌ಗೆ ಜನವರಿಯಲ್ಲಿ ಟೆಂಡರ್; ಸಂಸದ ಡಿ.ಕೆ.ಸುರೇಶ್

ತುಮಕೂರು: ಹೇಮಾವತಿ ನಾಲೆಯಿಂದ ನೇರವಾಗಿ ಪೈಪ್‌ಲೈನ್ ಮೂಲಕ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುವ `ಲಿಂಕ್ ಕೆನಾಲ್' ವಿವಾದಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ..ಕೆ.ಸುರೇಶ್ ಎಂಟ್ರಿಯಾಗಿದೆ.

ಕುಣಿಗಲ್ ಅಮೃತೂರಿನಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಲಿಂಕ್ ಕೆನಾಲ್‌ಗೆ ಸರ್ಕಾರದ ಅನುಮತಿ ಸಿಕ್ಕಿದ್ದು ಜನವರಿಗೆ ಕಾಮಗಾರಿಗೆ ಟೆಂಡರ್ ಕೆರೆಯುವ ಸಾಧ್ಯತೆ ಇದೆ ಎಂದು ಹೇಳಿರುವುದು ತುಮಕೂರು ಜಿಲ್ಲೆಯ ಪಾಲಿಗೆ ಮರ್ಮಾಘಾತ ಎನ್ನಿಸಿದೆ.