ತುಮಕೂರು: ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಕ್ಷಯರೋಗಿಗಳ ಸಂಖ್ಯೆ ಶೇ.45 ರಷ್ಟು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಜಿಲ್ಲೆಗೆ ಬೆಳ್ಳಿಯ ಪದಕ ಘೋಷಣೆ ಮಾಡಿದೆ.
ಮಾ.24ರಂದು ಪ್ರಧಾನ ಮಂತ್ರಿ ನರೇಂದ್ರಮೋದಿ ವಾರಣಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ಳಿ ಪದಕ ಪ್ರದಾನ ಮಾಡಲಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಸನತ್‌ಕುಮಾರ್ ತಿಳಿಸಿದ್ದಾರೆ.
2022ರಲ್ಲಿಯೂ ಸಹ ಕಂಚಿನ ಪದಕ ಪಡೆದಿದ್ದ ತುಮಕೂರು ಜಿಲ್ಲೆಗೆ ಈ ವರ್ಷ ಬೆಳ್ಳಿಯ ಪದಕ ಬಂದಿದೆ. 2025ರ ವೇಳೆಗೆ ತುಮಕೂರು ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ.