ತುಮಕೂರು: ದೊಡ್ಡ ಪ್ರಮಾಣದಲ್ಲಿ ಆಧುನಿಕತೆ ಬೆಳೆದಿದ್ದರೂ ಕೂಡ ಮೌಧ್ಯಕ್ಕೆ ಜಾರಿ ಹಸುಗೂಸನ್ನು ಕಳೆದುಕೊಂಡಿರುವುದು ಬಹಳ ದುರದೃಷ್ಟಕರ ಘಟನೆ ಎಂದು ಶಾಸಕ ಬಿ.ಸುರೇಶಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಟ್ಟಿಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಸಂಪ್ರದಾಯದ ಹೆಸರಿನಲ್ಲಿ ಮೌಢ್ಯದ ಆಚರಣೆ ಬೇಡ, ಆಧುನಿಕ ಕಾಲಕ್ಕೆ ತಕ್ಕನಾಗಿ ವೈಚಾರಿಕತೆ ಬೆಳಸಿಕೊಳ್ಳಬೇಕು ಎಂದರು.
ಮಲ್ಲೇನಹಳ್ಳಿ ಗೋಲರಟ್ಟಿಯಲ್ಲಿ ಮೌಢ್ಯದಿಂದಲೊ ಅಥವಾ ಅನಾರೋಗ್ಯದಿಂದಲೊ
ಮಕ್ಕಳು ಸಾವಿಗೀಡಾಗಿರುವುದು ದುರಾದೃಷ್ಟಕರ ಆದರೆ, ಇಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು ಜನರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶಿವಲಿಂಗಯ್ಯ ಮತ್ತಿತರರು ಇದ್ದರು.