ಜಿಲ್ಲೆ

ಶ್ರೀರಾಮದೇವರ ಬೆಟ್ಟದಲ್ಲಿ ಕಾಡ್ಗಿಚ್ಚು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ದೇವರಾಯನದುರ್ಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತುಮಕೂರು ತಾಲೂಕಿನ ಕರೆಕಲ್‌ಪಾಳ್ಯ ಸಮೀಪದ ಶ್ರೀರಾಮದೇವರ ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಕಿಡಿಗೇಡಿಗಳು ಮಂಗಳವಾರ ಸಂಜೆ ರಾಮದೇವರ ಬೆಟ್ಟಕ್ಕೆ ಬೆಂಕಿಯಿಟ್ಟಿದ್ದು ಕಾಡ್ಗಿಚ್ಚು ಬೆಟ್ಟಕ್ಕೆ ಆವರಿಸಿದೆ. ಸ್ಥಳೀಯರಿಂದ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಅಗ್ನಿಶಾಮಕ ಶಾಮಕ ಸಿಬ್ಬಂದಿಗಳಿಂದ ಬೆಂಕಿ ನಿಂದಿಸಲು ಹರಸಾಹಸ ಮಾಡುತ್ತಿದ್ದಾರೆ, ಬೆಟ್ಟದಲ್ಲಿ ಸಾಕಷ್ಟು ಔಷಧೀಯ ಸಸ್ಯಗಳು, ಪ್ರಾಣಿ ಸಂಕುಲಗಳಿದ್ದು ಪ್ರತಿವರ್ಷ ಕಾಡ್ಗಿಚ್ಚಿನಿಂದ ಅಪಾಯಕ್ಕೆ ಸಿಲುಕುತ್ತಿವೆ..

ವನವಾಸ ಸಂದರ್ಭದಲ್ಲಿ ರಾಮ ಇಲ್ಲಿಯೂ ನೆಲೆಸಿರುವ ಐತಿಹ್ಯ ಕೂಡ ಇದೆ. ಹಾಗಾಗಿ, ಈ ಬೆಟ್ಟ ರಾಮದೇವರ ಬೆಟ್ಟ ಎಂದೇ ಪ್ರಸಿದ್ಧಿ ಪಡೆದಿದೆ. ಬೆಟ್ಟದಲ್ಲಿ ರಾಮ ಪಾದುಕೆ, ಸೀತಾ ಸೆರಗು, ಶಿವನ ದೇವಾಲಯವಿದೆ.

ಕಲ್ಲಿನಲ್ಲಿ ಮೂಡಿರುವ ಸೀತಾ ಸೆರಗು ಬಗ್ಗೆ ಪುರಣಾಕಥೆಗಳಿವೆ. ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಈಗಲು ನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತಿವೆ.