ಜಿಲ್ಲೆ

ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ ಮುದ್ದಹನುಮೇಗೌಡ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ರಾಜ್ಯದಲ್ಲಿ ಎದುರಾಗಿರುವ ಕಾವೇರಿ ಜಲವಿವಾದ ಭಗೆಹರಿಸಲು ಮೇಕೆದಾಟು ಯೋಜನೆ ಶಾಶ್ವತ ಪರಿಹಾರವಾಗಲಿದ್ದು, ಎರಡು ರಾಜ್ಯಗಳ ನಡುವೆ ಮಧ್ಯಸ್ಥಿಕೆವಹಿಸಿ ಯೋಜನೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಬರಗಾಲ ನ್ಯಾಯಾಧೀಕರಣದ ಆದೇಶವನ್ನು ಉಲ್ಲಂಘಿಸುವAತಾಗಿದೆ, ಇಂತಹ ಸಂಕಷ್ಟ ಪ್ರತಿವರ್ಷ ಸಾಮಾನ್ಯವಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಮೇಕೆದಾಟು ನೀರಾವರಿ ಯೋಜನೆಗೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿದ್ದಾರೆ.

ಬರವಿದ್ದರೂ ತಮಿಳುನಾಡು ನೀರುಬಿಡಲು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವಿವಾದ ಭುಗಿಲೆದ್ದಿದ್ದು ಜನರ ನೆಮ್ಮದಿ ಕೆಡಿಸಿದೆ. ರಾಜ್ಯದಲ್ಲಿರುವ ಬರ ಕಾರಣದಲ್ಲಿ ಜನರಿಗೂ ನಿರಂತರ ಹೋರಾಟ ಅನಿವಾರ್ಯ ಎನ್ನಿಸಿರುವುದು ಸರ್ಕಾರಗಳಿಗೂ ಮುಜುಗರ ತರುವ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಹಿತಾಸಕ್ತಿ ದೃಷ್ಠಿಯಿಂದ ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಸಹಕಾರ ನೀಡಬೇಕು, ಜಲವಿವಾದವವನ್ನು ಭಗೆಹರಿಸಲು ದೇಶದ ಪ್ರಧಾನಮಂತ್ರಿ ಅವರನ್ನು ಮನಒಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಅವರ ಮಧ್ಯಪ್ರವೇಶದಿಂದ ಮೇಕೆದಾಟು ಯೋಜನೆ ಅನುಷ್ಟಾನಗೊಳಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಎರಡೂ ರಾಜ್ಯಗಳ ಸಂಬAಧ ಕೂಡ ಸುಧಾರಿಸಲಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಹಿಂದೆ ನಾನು ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಮೇಕೆದಾಟು ಯೋಜನೆಯ ಅನಿವಾರ್ಯತೆ ಬಗ್ಗೆ ಸಂಸತ್ ಅಧಿವೇಶನದಲ್ಲಿಯೂ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದರು.

ಪ್ರತಿ ವರ್ಷ ಕಾಡುವ ಕಾವೇರಿ ಜಲವಿವಾದವನ್ನು ಶಾಶ್ವತವಾಗಿ ತಪ್ಪಿಸಿಕೊಳ್ಳಲು ಮೇಕೆದಾಟು ನೀರಾವರಿ ಯೋಜನೆ ಪರಿಹಾರವಾಗಿದೆ. ಈ ಯೋಜನೆಯನ್ನು ಆರಂಭಿಸಲು ಎರಡೂ ರಾಜ್ಯಗಳ ನಡುವಿನ ವಿವಾದ ಭಗೆಹರಿಸಲು ಮಧ್ಯಸ್ಥಿತಿ ವಹಿಸಬೇಕು ಎಂದು ಮಾನ್ಯ ಪ್ರಧಾನಮಂತ್ರಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ.
ಎಸ್.ಪಿ.ಮುದ್ದಹನುಮೇಗೌಡ
ಮಾಜಿ ಸಂಸದ