ಜಿಲ್ಲೆ

ಡಿ.7ರಿಂದ ಪೊಲೀಸ್ ಅಧೀಕ್ಷಕರ ನಡೆ, ಪೊಲೀಸ್ ಠಾಣೆ ಕಡೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ಜನತಾದರ್ಶನದಲ್ಲಿ ಪೊಲೀಸ್ ಇಲಾಖೆಗೆ ಸಂಬAಧಪಟ್ಟ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವರ ಸೂಚನೆಯಂತೆ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರೇ ಭೇಟಿ ನೀಡಿ ಸಾರ್ವಜನಿಕರ ಜತೆ ಸಂವಾದ ನಡೆಸಲು ಕಾರ್ಯಕ್ರಮ ರೂಪಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಡಿ.7ರಿಂದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಜತೆ ಸಂವಾದ ನಡೆಸಿ, ಸಮಸ್ಯೆಗಳನ್ನು ಆಲಿಸಲು ವೇಳಾಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಡಿ.7ರಂದು ಬೆಳಗ್ಗೆ 10.30ಕ್ಕೆ ಪಾವಗಡ ತಾಲೂಕು ತಿರುಮಣಿ, ಮಧ್ಯಾಹ್ನ 1.30ಕ್ಕೆ ವೈ.ಎನ್.ಹೊಸಕೋಟೆ, ಸಂಜೆ 4ಕ್ಕೆ ಅರಸೀಕೆರೆ, ಡಿ.8ರಂದು ಬೆಳಗ್ಗೆ 10.30ಕ್ಕೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ, 12.30ಕ್ಕೆ ತಾವರೆಕೆರೆ, 3.30ಕ್ಕೆ ಕಳ್ಳಂಬೆಳ್ಳ, 5.30ಕ್ಕೆ ಕೋರಾ ಠಾಣೆಯಲ್ಲಿ ಹಾಜರಿದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಡಿ.12ರಂದು ಬೆಳಗ್ಗೆ 10.30ಕ್ಕೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ, 1.30ಕ್ಕೆ ಮಿಡಿಗೇಶಿ, 4ಕ್ಕೆ ಕೋಳಾಲ, ಡಿ.13ರಂದು ಬೆಳಗ್ಗೆ 10.30ಕ್ಕೆ ಬೆಳ್ಳಾವಿ, 1.30ಕ್ಕೆ ಚೇಳೂರು, 4ಕ್ಕೆ ಸಿಎಸ್‌ಪುರ ಠಾಣೆಯಲ್ಲಿ ಜನರು ಭೇಟಿ ಮಾಡಬಹುದು.

ಡಿ.14ರಂದು ಬೆಳಗ್ಗೆ 10.30ಕ್ಕೆ ಹೊನ್ನವಳ್ಳಿ,1.30ಕ್ಕೆ ಹಂದನಕೆರೆ, 4ಕ್ಕೆ ಹುಳಿಯಾರು, ಡಿ.15ರಂದು ಬೆಳಗ್ಗೆ 10.30ಕ್ಕೆ ನೊಣವಿನಕೆರೆ, 1.30ಕ್ಕೆ ದಂಡಿನಶಿವರ, 4ಕ್ಕೆ ತುರುವೇಕೆರೆ, ಡಿ.16ರಂದು ಬೆಳಗ್ಗೆ 10.30ಕ್ಕೆ ಹೆಬ್ಬೂರು, ಮಧ್ಯಾಹ್ನ 1.30ಕ್ಕೆ ಹುಲಿಯೂರುದುರ್ಗ, ಸಂಜೆ 4ಕ್ಕೆ ಅಮೃತೂರು ಪೊಲೀಸ್ ಠಾಣೆಗಳಲ್ಲಿ ಎಸ್‌ಪಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.