ಜಿಲ್ಲೆ

ತೆರದ ಬಾವಿಯಲ್ಲಿ ತಾಯಿ, ಮಗನ ಶವ ಪತ್ತೆ; ಶಿರಾ ನಗರದಲ್ಲಿ ಘಟನೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಶಿರಾ ನಗರದ ಚಿಕ್ಕಕೆರೆ ಹಿಂಭಾಗದ ಬಾವಿಯಲ್ಲಿ 40 ವರ್ಷದ ಮಹಿಳೆ ಹಾಗೂ ಆಕೆಯ 12 ವರ್ಷದ ಮಗ ಶವವಾಗಿ ಪತ್ತೆಯಾಗಿದ್ದಾರೆ.

ರೈತ ಬೊಪ್ಪಜ್ಜ ಎಂಬುವವರಿಗೆ ಸೇರಿದ ಬಾವಿಯಾಗಿದ್ದು ತುಮಕೂರು ಮೂಲದ ಹಾಜಿರಾ (40) ಮತ್ತು ಆಕೆಯ ಮಗ ಅಮಾನ್‌ಪಾಷ(12) ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಸಗ್ನಿಶಾಮಕ ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ಶವಗಳನ್ನು ಹೊರತೆಗಿದ್ದಾರೆ.

ಶಿರಾ ನಗರ ಪೊಲೀಸï ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.